ರಾಯಚೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಘುನಾಥ.ಎಸ್. ಮತ್ತು ಜಿಲ್ಲಾ ಪ್ರತಿನಿಽ ಸ್ಥಾನಕ್ಕೆ ನಾರಾಯಣರಾವ್ ಕುಲ್ಕರ್ಣಿ ಸ್ಪಽðಸಿದ್ದು ಏ.೧೩ ರಂದು ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು ಮತದಾರರು ಬೆಂಬಲಿಸುವAತೆ ಮಹಾಸಭಾದ ಮಾಜಿ ಅಧ್ಯಕ್ಷ ಜಗನ್ನಾಥ ಕುಲ್ಕರ್ಣಿ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಘುನಾಥ ಹಾಗೂ ಜಿಲ್ಲಾ ಪ್ರತಿನಿಽ ನಾರಾಯಣರಾವ ಕುಲ್ಕರ್ಣಿ ಸಂಘಟನೆಯಲ್ಲಿ ತೊಡಗಿಸಿಕೊಂಡವರಾಗಿದ್ದು, ಗೆಲುವು ಸಾಽಸಿದರೆ ಐದು ವರ್ಷದಲ್ಲಿ ನೂರು ಕೋಟಿ ರೂಹಣವನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸಂಕಷ್ಟದಲ್ಲಿರುವರಿಗೆ ಆರೋಗ್ಯ ಸಹಾಯ ಸೇರಿ ಅನೇಕ ಯೋಜನೆಗಳನ್ನು ರೂಪಿಸಲು ಚಿಂತನೆ ಮಾಡಿದ್ದಾರೆ. ಎಲ್ಲಾ ಉಪ ಪಂಗಡಗಳಿಗೂ ಪ್ರಾತಿನಿಧ್ಯ ನೀಡಿ ತ್ರಿಮತಸ್ಥರನ್ನು ಒಗ್ಗೂಡಿಸಿಕೊಂಡು ಹೋಗಲು ಉದ್ದೇಶಿಸಿದ್ದಾರೆಂದರು.
ಈ ಸಂದರ್ಭದಲ್ಲಿ ಕಣ್ವ ಪರಿಷತ್ ರಾಜ್ಯಾಧ್ಯಕ್ಷ ಕಿಶನರಾವ್ ಯಕರನಾಳ, ನಾರಾಯಣರಾವ್, ಗೋವಿಂದರಾವ್, ಪ್ರಸನ್ನ ಅಲಂಪಲ್ಲಿ, ಗೋಪಾಲಕೃಷ್ಣ ತಟ್ಟಿ, ರಮೇಶಾಚಾರ್ಯ ಬಾದರ್ಲಿ, ಕೃಷ್ಣರಾವ್ ತಿಂತಿಣಿ, ಮುರುಳಿಧರ ಇದ್ದರು.