ಮಂಗಳೂರು: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ಸಹಯೋಗದಲ್ಲಿ ಅಕ್ಟೋಬರ್ 12ರಂದು ನಡೆಯಲಿರುವ ಬ್ರಹ್ಮಶ್ರೀ ನಿಲಯ ಉದ್ಘಾಟನೆ, ಪ್ರತಿಭಾವಂತ ಸಾಧಕರಿಗೆ ಸನ್ಮಾನ, ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಹೂ ಹಾಕುವ ಕಲ್ಲು ಸನ್ನಿಧಿಯಲ್ಲಿ ನಡೆಯಿತು.
ಸುಮಾರು 13 ವರ್ಷಗಳಿಂದ ಟಾರ್ಪಲ್ ಹೊದಿಕೆಯ ಮನೆಯಲ್ಲಿ ಜೀವನ ನಡೆಸುತ್ತಿದ್ದ ಕಡುಕುಟುಂಬಕ್ಕೆ ಬಿಲ್ಲವ ವೇದಿಕೆಯು ಸುಸಜ್ಜಿತ ಮನೆ ನಿರ್ಮಾಣ ಮಾಡಿದ್ದು, ಈ ಮನೆಯ ಹಸ್ತಾಂತರ ಕಾರ್ಯಕ್ರಮವೂ ಅಂದು ನಡೆಯಲಿದೆ. ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್ ಕಾರ್ಕಳ ಹಾಗೂ ವಿಧಾನಸಭಾಧ್ಯಕ್ಷ ಯುಟಿ ಖಾದರ್, ಶ್ರೀ ಕ್ಷೇತ್ರ ಕುದುರೋಳಿಯ ಅಧ್ಯಕ್ಷ ಜಯರಾಜ್ ಕುದ್ರೋಳಿ, ಕೋಶಾಧಿಕಾರಿ ಪದ್ಮರಾಜ್ ಆರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಹಲವರು ಉಪಸ್ಥಿತರಿರುವರು.
ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರ ಕಣಂತೂರಿನ ಆನುವಂಶಿಕ ಮುಕ್ತಸರ ಪದ್ಮನಾಭ ರೈ ಯಾನೆ ಮಂಜು ಬಂಡಾರಿ, ಶ್ರೀ ಕ್ಷೇತ್ರ ಕೂಟತಜೆಯ ಆಡಳಿತ ಮುಕ್ತೇಸರ ಭರತ್ ನಾಯ್ಕ ನಚ್ಚಗುತ್ತು, ಉಳ್ಳಾಲ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ ಸುವರ್ಣ ಸೇರಿದಂದಂತೆ ಹಲವರ ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಆನುವಂಶಿಕ ಮುಕ್ತೈಸರಾದ ಪದ್ಮನಾಭ ರೈ ಯಾನೆ ಮಂಜು ಬಂಡಾರಿ ಮಾತನಾಡಿ, ಇಂತಹ ಸಮಾಜ ಸೇವೆ ಸೇವೆಯನ್ನು ಬಿಲ್ಲವ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಇಂತಹ ಕೆಲಸಗಳು ಇನ್ನಷ್ಟು ಹೆಚ್ಚು ಇವರಿಗೆ ಮಾಡುವ ಶಕ್ತಿಯನ್ನು ಆ ದೇವರು ಒದಗಿಸಲಿ ಎಂದರು.
ಶ್ರೀ ಕ್ಷೇತ್ರ ಕೂಟತಜೆಯ ಆಡಳಿತ ಮುಕ್ತೇಸರ ಭರತ್ ನಾಯ್ಕ ನಚ್ಚಗುತ್ತು ಮಾತನಾಡಿ, ಬಿಲ್ಲವ ಸಮುದಾಯದ ಕೆಲಸ ಅತ್ಯುತ್ತಮವಾಗಿದೆ, ಇಂತಹ ಸಂಘಟನೆಗಳು ಈ ರೀತಿ ಸಮಾಜಸೇವೆ ಮಾಡಿದಲ್ಲಿ ಹೊಸ ಮನೆಯ ಕನಸು ಕಂಡ ಅದೆಷ್ಟೋ ಕಡುಬಡತನದ ಕುಟುಂಬಗಳಿಗೆ ನೆರವಾಗುವುದು ಎಂದರು.
ವೇದಿಕೆಯ ಉಪಾಧ್ಯಕ್ಷ ದಿವಾಕರ್ ಪೂಜಾರಿ ಬಾಳಿಪುಣಿ, ಕಾರ್ಯಧ್ಯಕ್ಷ ಬೇಬಿ ರಾಜ್ ಮಾಡಿಪು, ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಬೋಳೂರು, ಪ್ರಧಾನ ಕಾರ್ಯದರ್ಶಿ ವರುಣ್ ನವಗ್ರಾಮ, ಕೋಶಾಧಿಕಾರಿ ಕಿರಣ್ ಕೂಟತಜೆ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯದ ಗೌರವಾಧ್ಯಕ್ಷರುಗಳು, ಗೌರವ ಸಲಹೆಗಾರರು, ಸಂಘಟನಾ ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.