ಉಡುಪಿ: ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಆಟಿಡೊಂಜಿ ವಿಪ್ರಕೂಟ ಸಂಭ್ರಮಾಚರಣೆ ಆ.15ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2ಗಂಟೆವರೆಗೆ ಕನ್ನರ್ಪಾಡಿ ಶ್ರೀದೇವಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಭಾ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9.30ಕ್ಕೆ ಮಾಹೆ ಉಪಕುಲಪತಿ ಡಾ. ಕೆ. ಶರತ್ ರಾವ್ ಉದ್ಘಾಟಿಸಲಿದ್ದಾರೆ. ಮುನಿಯಾಲು ಆಯುವೇದ ಕಾಲೇಜು ಪ್ರಾಧ್ಯಾಪಕ ಹೆರ್ಗ ಹರಿಪ್ರಸಾದ್ ಭಟ್, ಮಾಜಿ ಶಾಸಕ ಕೆ. ರುಪತಿಭಟ್, ಉದ್ಯಮಿ ರಮೇಶ್ ಬೀಡು, ನಗರಭಾ ಸದಸ್ಯ ಕೃಷ್ಣರಾವ್ ಕೊಡಂಚ, ಚಿತ್ರನಟಿ ರಾಧಿಕಾ ನಾರಾಯಣ್ ಮೊದಲಾದವರು ಭಾಗವಹಿಸಲಿದ್ದಾರೆ. 10.30ರಿಂದ 12.30ರವರೆಗೆ ಸಮೂಹ ನೃತ್ಯ, 12.30ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಭಟ್, ಕೋಶಾಧಿಕಾರಿ ಹಯವದನ ಭಟ್, ಪ್ರಮುಖರಾದ ಶ್ರೀನಿವಾಸ ಬಲ್ಲಾಳ್, ರಾಜೇಂದ್ರ ಕೆ. ಮೊದಲಾದವರು ಉಪಸ್ಥಿತರಿದ್ದರು.