ಜಿಲ್ಲೆ

ಬ್ರಹ್ಮಬೈದರ್ಕಳ ನೇಮೋತ್ಸವ ಗೊನೆ ಮುಹೂರ್ತ

ಸೌಮ್ಯ ಆರ್

ಕಾಸರಗೋಡು: ಅಡ್ಕತ್ತಬೈಲ್ ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನಃ ಪ್ರತಿಷ್ಠಾಪನೆ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವಕ್ಕೆ ಗೊನೆ ಮುಹೂರ್ತ ಶುಕ್ರವಾರ ನಡೆಯಿತು. ಕಾರ್ಯಕ್ರಮಕ್ಕೂ ಮೊದಲು ಗಣಪತಿ ಹೋಮ ನಡೆಯಿತು. ಅಡ್ಕತ್ತಬೈಲು ಹೊಸಮನೆ ತರವಾಡು ಪ್ರಮುಖರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ಏ.10ರಂದು ಬೆಳಗ್ಗೆ ಪುನಃ ಪ್ರತಿಷ್ಠಾಪನೆ ವಾರ್ಷಿಕ ದಿನಾಚರಣೆ ಅಂಗವಾಗಿ ಬೆಳಗ್ಗೆ 7ಕ್ಕೆ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ, ಬ್ರಹ್ಮ ಬೈದೆರ್, ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ದೈವಗಳಿಗೆ ಪೂಜೆ, ಭಜನೆ, ರಾತ್ರಿ 8ಕ್ಕೆ ಗುಳಿಗ, ಕೊರತಿ ದೈವಗಳ ಕೋಲ ನಡೆಯಲಿದೆ. 11ರಂದು ಸಂಜೆ 6ಕ್ಕೆ ಬೈದರ್ಕಳ ದರ್ಶನ, 7ಕ್ಕೆ ಬ್ರಹ್ಮ ಬಲಿ ಮತ್ತು ಬೈದರ್ಕಳ ಗರಡಿ ಇಳಿಯುವುದು. 12ರಂದು ಬೆಳಗ್ಗೆ 3ಕ್ಕೆ ಮಾಯಾಂದಳ ದೇವಿ ದರ್ಶನ ನಡೆಯಲಿದೆ.