ಜಿಲ್ಲೆ

ಧರ್ಮ ಉಳಿಸುವ ಕಾರ್ಯ ನಿರಂತರ : ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಆಶಯ

ಸೌಮ್ಯ ಆರ್

ಕಿನ್ನಿಗೋಳಿ: ಹರಿಹರ ಶ್ರೀ ರಾಮ ಭಜನಾ ಮಂದಿರದ ಬ್ರಹ್ಮಕುಂಭಾಭಿಷೇಕಕ್ಕೆ ಗ್ರಾಮಸ್ಥರು ಸೇರಿ ಕೈಜೋಡಿಸಿರುವುದು ಅಭಿನಂದನೀಯ. ಗ್ರಾಮೀಣ ಪ್ರದೇಶದಲ್ಲಿ ಭಜನಾ ಮಂದಿರ ಪ್ರಾರಂಭಿಸಿ ಭಜನೆಯಂತಹ ಧಾರ್ಮಿಕ ಆಚರಣೆಯನ್ನು ಉಳಿಸುವ ಕಾರ್ಯ ನಿರಂತರವಾಗಿರಲಿ ಎಂದು ಮಂದಿರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೇಳಿದರು.

ಹರಿಹರ ಶ್ರೀ ರಾಮ ಭಜನಾ ಮಂದಿರದ ನೂತನ ಮಹಾದ್ವಾರ ಸಮರ್ಪಣೆ ಮತ್ತು ಬ್ರಹ್ಮಕುಂಭಾಭಿಷೇಕ, ವಾರ್ಷಿಕ ಭಜನಾ ಮಂಗಳ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಪ್ರಮುಖರಾದ ಧನಂಜಯ ಶೆಟ್ಟಿಗಾರ್ ಸಾಗರಿಕಾ, ಶಯನ್ ಶೆಟ್ಟಿಗಾರ್, ಶಶೀಂದ್ರ ಶೆಟ್ಟಿ ಅಡ್ರಗುತ್ತು, ಪ್ರೇಮರಾಜ ಶೆಟ್ಟಿ, ಪ್ರಕಾಶ್ ಆಚಾರ್ಯ, ಗೋಪಾಲ, ಶರತ್ ಶೆಟ್ಟಿ, ಶಂಕರ, ಸಂಜೀವ, ಚಂದ್ರಶೇಖರ್, ಸಂತೋಷ್ ಉದಕಗಿರಿ, ರಾಮಣ್ಣ, ವೆಂಕಪ್ಪ, ಸಂಜೀವ, ಚಂದ್ರಶೇಖರ ಟಿ., ಶಾಂತಾ, ಸುಷ್ಮಾ ಮತ್ತಿತರರಿದ್ದರು.