raichur 
ಜಿಲ್ಲೆ

ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ನಾಲ್ಕು ದಿನ ರಕ್ತದಾನ ಶಿಬಿರ

ರಾಯಚೂರು ಬ್ರಹ್ಮಕುಮಾರಿ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಪ್ರಕಾಶಮಣಿ ಅವರ 18ನೇ ಪುಣ್ಯತಿಥಿಯ ನಿಮಿತ್ತ ಆ.22 ರಿಂದ 25 ರವರೆಗೆ ಬೃಹತ್ ರಕ್ತದಾನ ಶಿಬಿರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ನೇಪಾಳದಲ್ಲಿ 4 ದಿನಗಳು 150ಕ್ಕೂ ಹೆಚ್ಚು ಬ್ರಹ್ಮ ಕುಮಾರಿ ಸೇವಾ ಕೇಂದ್ರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, 4 ದಿನಗಳ ವರೆಗೆ ನಡೆಯುವ ರಕ್ತ ದಾನ ಶಿಬಿರದಲ್ಲಿ 1 ಲಕ್ಷ ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸುವ ಉದ್ದೇಶ ಹೊಂದಿದೆ.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಸಂಘ -ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿದೆ. 22 ರಂದು ಎಲ್‌ವಿಡಿ ಕಾಲೇಜು ಸಭಾಂಗಣದಲ್ಲಿ. ಆ. 23 ರಂದು ಐಎಂಎ ಸಭಾಂಗಣದಲ್ಲಿ. ಆ.24 ರಂದು ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ, ವೀರಾಂಜನೇಯ ಕಲ್ಯಾಣ ಮಂಟಪ ಮತ್ತು ಆ.25 ರಂದು ಪೂರ್ಣಿಮಾ ಆಯುರ್ವೇದಿಕ ಮೇಡಿಕಲ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ ಎಂದರು.

ಈ ಸ್ಥಳಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ. ರಕ್ತದಾನ ಶಿಬಿರ ದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ರಕ್ತದಾನ ಮಾಡಲು ಮುಂದಾಗಬೇಕು, ರಕ್ತದಾನ ಮಾಡಲು ತಮ್ಮ ಹೆಸರನ್ನು ನೊಂದಾಯಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ವೆಂಕಟೇಶ ನಾಯಕ, ತ್ರಿವಿಕ್ರಮ ಜೋಷಿ, ಡಾ.ಶಾಮಣ್ಣ ಮಾಚನೂರು, ಲಕ್ಷ್ಮೀಕಾಂತರೆಡ್ಡಿ, ರಾಜೇಂದ್ರ ಕುಮಾರ ಶಿವಾಳೆ, ಶಿವ ಗಿರೀಶ, ಡಾ.ಸುಶ್ರುತ ನೀಲವ್ ಇದ್ದರು.