ಬಾದಾಮಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರಭಾರಿ ತಹಸೀಲ್ದಾರ್ ಎಸ್. ಎಫ್ .ಬೊಮ್ಮನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು. ಯೋಗೇಶ ತೊಗರಿ, ವಿ.ಎಸ್.ಹೋಳಿ ಇದ್ದರು. 
ಜಿಲ್ಲೆ

ಬಾದಾಮಿ ನ್ಯಾಯಾಲಯ ಕಲಾಪ ಬಹಿಷ್ಕಾರ

ಬಾದಾಮಿ: ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಚಂದನ ಹಾಗೂ ಮಂಜುಳಾ ಗಿಡ್ಡನ್ನವರ ದಂಪತಿ ಹಾಗೂ ನ್ಯಾಯವಾದಿ ಸಂತೋಷ ಪಾಟೀಲರ ಮೇಲೆ ರಾಜಕೀಯ ಮುಖಂಡರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಬಾದಾಮಿ ತಾಲೂಕು ವಕೀಲರ ಸಂಘದ ಸದಸ್ಯರು ಗುರುವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದರು. ತಾಲೂಕು ವಕೀಲರ ಸಂಘದ ವತಿಯಿಂದ ಪ್ರಭಾರಿ ತಹಸೀಲ್ದಾರ್ ಎಸ್.ಎ್.ಬೊಮ್ಮನ್ನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಯೋಗೇಶ ತೊಗರಿ, ಉಪಾಧ್ಯಕ್ಷ ವಿ.ಎಸ್.ಹೋಳಿ ಇದ್ದರು.