ರಟ್ಟಿಹಳ್ಳಿ: ಯಾವುದೋ ಕಾರಣಕ್ಕೆ ವಿದ್ಯಾಥಿರ್ಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಜನತಾ ಪ್ಲಾಟ್ನಲ್ಲಿ ನಡೆದಿದೆ.
ಮಂಜುನಾಥ ರವಿ ಮೂಲಿಮನಿ (19) ಮೃತ ವಿದ್ಯಾಥಿರ್.
ಈತ ಯಾವುದೋ ವಿಚಾರಕ್ಕೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.