ಜಿಲ್ಲೆ

ಹುಟ್ಟುಹಬ್ಬದಂದೇ ಬೆಂಗಳೂರಿನಲ್ಲಿ ಪ್ರಾಣ ಬಿಟ್ಟ ಬಾಲಕ..Bengaluru

ಬೆಂಗಳೂರು: ( Bengaluru  ) ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟಿದ್ದು, ಹುಟ್ಟು ಹಬ್ಬದಂದೇ ಮಸಣ ಸೇರಿದ್ದಾನೆ.

ಭಾನು ತೇಜ ( 12) ಮೃತ ಬಾಲಕ. ಭಾನು ತೇಜ ಕುಟುಂಬಸ್ಥರು ಆಂಧ್ರದ ಚಿತ್ತೂರು ಮೂಲದವರು. ಜಸ್ಟ್‌ 1 ತಿಂಗಳ ಹಿಂದೆಯಷ್ಟೇ ಭಾನು ತೇಜ ಬೆಂಗಳೂರಿಗೆ ಬಂದಿದ್ದ. ಆರ್.ಟಿ ನಗರದ ಸತ್ಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೇದ ಕಲಿತಿದ್ದ.

ನಡೆದಿದ್ದೇನು?: ವೇದಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ಭಾನು ತೇಜ ನಿನ್ನೆ ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಭಾನು ತೇಜ ಆರ್.ಟಿ ನಗರದಿಂದ ಹೊರಮಾವಿನಲ್ಲಿರುವ ಅಕ್ಕನ ಮನೆಗೆ ಬಂದಿದ್ದ. ಹುಟ್ಟುಹಬ್ಬ ಆಚರಿಸಿಕೊಂಡು ಅಣ್ಣ ಹಾಗೂ ಗುರುಗಳಾದ ಚಕ್ರಧರಣ್‌ ಜತೆ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ.

ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಷರ್ ಟ್ರಕ್​ವೊಂದು ಹಿಂಬದಿಯಿಂದ ಭಾನು ತೇಜ್​ ಇದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭಾನು ತೇಜ್​ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕ ತಲೆಯ ಮೇಲೆ ಟ್ರಕ್​ನ ಎರಡು ಚಕ್ರಗಳು ಹಿರಿದಿವೆ.​ ಭಾನು ತೇಜ್​ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಚಕ್ರಧರಣ್​ಗೆ ಸಣ್ಣ-ಪುಟ್ಟ ಗಾಯಗಳಾವಿವೆ

ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಟ್ರಾಫಿಕ್ ಠಾಣೆ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.