ಜಿಲ್ಲೆ

ನೀರಿನ ಹೊಂಡದಲ್ಲಿ ಮುಳಗಿ ಬಾಲಕ ಸಾವು

Haveri - Kariyappa Aralikatti

ಹಿರೇಕೆರೂರ: ನೀರಿನ ಹೊಂಡದಲ್ಲಿ ಮುಳಗಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ತರುಣ ಸಿದ್ದನಗೌಡ ಮರಿಪರಸಪ್ಪನವರ (9) ಮೃತ ಬಾಲಕ.

ಈತ ಹೊಂಡ ಬಳಿ ಆಟವಾಡುತ್ತ ಹೋಗಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಂಸಬಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.