ಜಿಲ್ಲೆ

ಕಾಳಿ ನದಿಗೆ ಬಿದ್ದು ಬಾಲಕ ಸಾವು

Uttara Kannada - Subash Hegde

ಕಾರವಾರ:ಕಟ್ಟಡಕ್ಕೆ ಹಾಕುವ ಸಲುವಾಗಿ ನೀರು ತುಂಬಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಕಾಳಿ ನದಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಗುರುವಾರ ಬಾಲಕನ ಶವ ನದಿಯಲ್ಲಿ ಪತ್ತೆಯಾಗಿದೆ.

ರೂಪಾನಂದ(14) ಮೃತ ಬಾಲಕ. ಕದ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯ ಬಸುಣಗಾ ಗ್ರಾಮದಲ್ಲಿ ತನ್ನ ಮನೆಯ ಕಾಮಗಾರಿಗೆ ನೀರು ಹಾಕಲು ನೀರು ತರುವ ಸಲುವಾಗಿ ಸಹೋದರನ ಜತೆ ನದಿಗೆ ತೆರಳಿದ್ದ. ಆ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದ.

ಅಗ್ನಿಶಾಮಕ, ಪೊಲೀಸ್ ಹಾಗೂ ಸ್ಥಳೀಯ ಮೀನುಗಾರರು ಆತನಿಗಾಗಿ ನಿರಂತರ ಹುಡುಕಾಟ ನಡೆಸಿದ್ದರು. ಗುರುವಾ ಚಿತ್ತಾಕುಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.