ಜಿಲ್ಲೆ

ಚರಂಡಿ ಗುಂಡಿಗೆ ಬಿದ್ದು ಬಾಲಕ ಸಾವು

ಎಸ್.ಎರ್ರಿಸ್ವಾಮಿ

ಸಂಡೂರು ತಾಲೂಕಿನ ಕುರೆಕುಪ್ಪದಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಚರಂಡಿ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ. ಪಟ್ಟಣದ ಪಿ.ಆರವಿಂದ (4) ಮೃತ. ಬಾಲಕನು ಸಂಜೆ ವೇಳೆ ತಾತನ ಮನೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದಿರುವುದರಿಂದ ಗಾಬರಿಗೊಂಡು ಪಾಲಕರು ಸುತ್ತಲೂ ಹುಡುಕಿದ್ದಾರೆ. ಅದೇ ವಾರ್ಡ್ ರಸ್ತೆಯ ಪಕ್ಕದಲಿನ ಚರಂಡಿ ನೀರಿನ ಕುಣಿಯಲ್ಲಿ ಮೃತದೇಹ ತೇಲಿದ್ದು ಪಾಲಕರು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆ ಸಾಗಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

====