ಜಿಲ್ಲೆ

ಪಾಲಿಕೆ ವಾಹನ ಹರಿದು ಬಾಲಕ ಮೃತ

ಬಳ್ಳಾರಿ : ತ್ಯಾಜ್ಯ ಸಂಗ್ರಹಿಸುವ ಪಾಲಿಕೆ ವಾಹನವೊಂದು ಮಗುವಿನ ಮೇಲೆ ಹರಿದು ಮೃತಪಟ್ಟಿರುವ ಘಟನೆ ಇಲ್ಲಿನ ಬಾಪುಜಿ ನಗರದಲ್ಲಿ ಮಂಗಳವಾರ ನಡೆದಿದೆ.

ನಗರದ ನಿವಾಸಿಯಾದ ಸಮರ ಹಾಗೂ ಶೈಲಜಾ ದಂಪತಿಯ ಪುತ್ರ ವಿಕ್ಕಿ (2) ಮೃತ. ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.