ಜಿಲ್ಲೆ

ಗೂಡ್ಸ್ ವಾಹನ ಹಾಯ್ದು ಬಾಲಕ ಸಾವು

ಲಕ್ಷೆ್ಮೕಶ್ವರ: ಪಟ್ಟಣದ ಉಮಾ ವಿದ್ಯಾಲಯದ ಆಟದ ಮೈದಾನದಲ್ಲಿ ಶನಿವಾರ ಮಹೀಂದ್ರಾ ಗೂಡ್ಸ್ ವಾಹನ ಹಾಯ್ದು ಪ್ರವೀಣ ವಾಸಪ್ಪ ಬಡಿಗೇರ (12) ಬಾಲಕ ಮೃತಪಟ್ಟ ಘಟನೆ ಸಂಭವಿಸಿದೆ.

ಪಟ್ಟಣದ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ ಮತ್ತು ಗೆಳೆಯ ಯುವರಾಜ ಗುಂಜಳ ಮೈದಾನದಲ್ಲಿ ಆಟಕ್ಕೆ ಹೋಗಿದ್ದರು. ಈ ವೇಳೆ ಮೈದಾನದಲ್ಲಿ ಅತ್ಯಂತ ನಿರ್ಲಕ್ಷ್ಯನದಿಂದ ಗೂಡ್ಸ್ ವಾಹನ ಚಲಾಯಿಸಿ ಬಾಲಕರಿಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಪ್ರವೀಣ ಮೃತಪಟ್ಟಿದ್ದಾನೆ. ಗಾಯಗೊಂಡ ಬಾಲಕ ಯುವರಾಜ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಕುರಿತು ಲಕ್ಷೆ್ಮೕಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.