ಜಿಲ್ಲೆ

ಬೆಲ್ಟ್​ ಕುತ್ತಿಗೆ ಸುತ್ತಿ ಬಾಲಕ ಮೃತ್ಯು

ಗೋಪಾಲಕೃಷ್ಣ ಪಾದೂರ್

ಉಡುಪಿ: ಮನೆಯಲ್ಲಿ ಆಟವಾಡುವಾಗ ಬೆಲ್ಟ್​ ಕುತ್ತಿಗೆಗೆ ಸಿಕ್ಕಿಹಾಕಿಕೊಂಡ ಪರಿಣಾಮ ಬಾಲಕನೋರ್ವ ಮೃತಪಟ್ಟ ಟನೆ ತೆಂಕನಿಡಿಯೂರಿನಲ್ಲಿ ನಡೆದಿದೆ.

ರಾನ್ಸ್​ ಕ್ಯಾತಲ್​ ಡಿಸೋಜ (12) ಮೃತ ಬಾಲಕ. ಸೋಮವಾರ ರಾತ್ರಿ ಸ್ನಾನ ಮಾಡಲು ಹೋದವನು ರೂಮಿನ ಬೆಡ್​ ಮೇಲೆ ಮಲಗಿದ್ದು ಮಾತನಾಡುತ್ತಿಲ್ಲ, ಬಾಯಿಯಲ್ಲಿ ಜೊಲ್ಲು ಹೊರಗೆ ಬಂದಿದೆ. ಇದನ್ನು ಗಮನಿಸಿದ ಈತನ ಅಕ್ಕ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದು, ಮನೆ ಹತ್ತಿರದ ಕ್ಲಿನಿಕ್​ಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಪಲ್ಸ್​ ತುಂಬಾ ಕಡಿಮೆ ಇದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗಲೇ ಬಾಲಕಮೃತಪಟ್ಟಿದ್ದಾನೆ. ಈ ಬಗ್ಗೆ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.