ಜಿಲ್ಲೆ

ದರೋಡೆಕೋರರಿಬ್ಬರ ಕಾಲಿಗೆ ಗುಂಡು

ಮರಿದೇವ ಹೂಗಾರ

ಹುಬ್ಬಳ್ಳಿ: ಸುಳಿತು ಅರಿತು ಬಂದಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಇಬ್ಬರು ದರೋಡೆಕೋರರ ಕಾಲಿಗೆ ಶನಿವಾರ ದೇವರಗುಡಿಹಾಳ ಹತ್ತಿರ ಗುಂಡು ಹೊಡೆಯಲಾಗಿದೆ.

ಅಂತಾರಾಜ್ಯ ದರೋಡೆಕೋರರಾದ ಉತ್ತರ ಪ್ರದೇಶ ಮೂಲದ ಇರ್ಷಾದ್, ಅಕ್ಬರ್ ಕಾಲಿಗೆ ಗುಂಡೇಟು ಬಿದ್ದಿದ್ದು, ಶಂಷಾದ್ ಖುರೇಷಿಯನ್ನು ಬಂಧಿಸಲಾಗಿದೆ. ಮತ್ತೊಬ್ಬ ತಾವು ತಂದಿದ್ದ ಕಾರ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಶಿವಮೊಗ್ಗದಿಂದ ಹುಬ್ಬಳ್ಳಿಗೆ ಬಂಧಿದ್ದ ಗ್ಯಾಂಗ್ ಮಾರುತಿ ಎಂಬುವವರ ಬೈಕ್ ಕಸಿದುಕೊಂಡು ರಾಯನಾಳ ಸಮೀಪ ದರೋಡೆಗೆ ಯತ್ನಿಸಿತ್ತು. ಖಚಿತ ಮಾಹಿತಿ ಮೇರೆಗೆ ಉಪನಗರ ಠಾಣೆ ಪೊಲೀಸರು ಬಲೆ ಬೀಸಿದ್ದರು.

ಈ ವೇಳೆ ಪೊಲೀಸರ ಕಣ್ಣಿಗೆ ಖಾರದಪುಡಿ ಎರಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ವೇಳೆ ಪೊಲೀಸರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಪಿಎಸ್‌ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿ ದ್ಯಾನೇಶ, ಆನಂದ ಜಾವೂರ ಅವರಿಗೆ ಗಾಯಗಳಾಗಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸುದ್ದಿಗಾರರೊಂದಿಗೆ ಮತನಾಡಿದ ಆಯುಕ್ತರು, ಶಿವಮೊಗ್ಗದಿಂದ ಈ ಗ್ಯಾಂಗ್ ಬಂದಿರುವ ಸುಳಿವು ಸಿಕ್ಕಿತ್ತು. ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ದರೋಡೆಕೋರರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದರು.