ಮಹಾಲಿಂಗಪುರ: ಜೀವನದಲ್ಲಿ ಸ್ವತಂತ್ರರಾಗಿ ಸಾಗುವಂತೆ ಮಾಡುವುದೇ ಶಿಕ್ಷಣ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಮಾಜಕ್ಕೆ ಪೂರಕವಾಗುವಂತೆ ವಿದ್ಯಾರ್ಜನೆ ಮಾಡಬೇಕೆಂದು ಮರೇಗುದ್ದಿ ಅಡವಿಸಿದ್ಧೇಶ್ವರ ಮಠದ ಡಾ. ನಿರುಪಾಧೀಶ್ವರ ಮಹಾಸ್ವಾಮಿಗಳು ಹೇಳಿದರು.
ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಶ್ರೀ ಚನ್ನಗಿರಿಶ್ವರ ಪ್ರಾಸಾಧಿಕ ಕಲಾ, ವಿಜ್ಞಾನ ಮತ್ತು ಡಿ.ಡಿ. ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಮತ್ತು ವಿದ್ಯಾರ್ಥಿ ಸಂಸತ್ತು ರಚನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾನಾಡಿದರು.
ಮಹಾವಿದ್ಯಾಲಯವು ಮರವಿದ್ದಂತೆ, ಮರದ ಕೊಂಬೆಯಂತೆ ವಿದ್ಯಾರ್ಥಿಗಳ ಭಾವ ಚಿಗುರಬೇಕು. ಗುರಿ ಇಟ್ಟುಕೊಂಡು ಮುನ್ನಡೆಯುತ್ತ ಗುರುಗಳಿಗೆ ವಿಧೇಯರಾಗಿರಬೇಕು ಎಂದರು.
ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಾಣಿಶಾಸ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಸರಸ್ವತಿ ಪಾಟೀಲ ಮಾತನಾಡಿ, ಕ್ರೀಡೆಯು ಸ್ಪರ್ಧಾತ್ಮಕ ಮನೋಭಾವನೆ, ಆರೋಗ್ಯ, ಮನಸ್ಸನ್ನು ಕೇಂದ್ರೀಕರಣಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಕೆ. ಎಂ. ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಐಕ್ಯೂಎಸ್‌ಸಿ ಸಂಯೋಜಕಿ ಡಾ. ಸುನಂದಾ ಸೊರಗಾಂವಿ, ರೋಹಿನಿ ಕಾಕಡೆ, ಅಭಯ ಉಗಾರೆ, ಎಸ್. ಎಸ್. ಮುಗಳ್ಯಾಳ, ಡಾ. ಎಸ್. ಸಿ. ಬಿಜ್ಜರಗಿ ವಿದ್ಯಾರ್ಥಿ ಪ್ರತಿನಿಧಿ ಈಶ್ವರಿ ಕಾಗಿ ಇತರರಿದ್ದರು.
ಸಿಬ್ಬಂದಿ ಕಾರ್ಯದರ್ಶಿ ಆರ್. ಎಸ್. ಪೂಜಾರಿ ಸ್ವಾಗತಿಸಿದರು. ಡಾ. ಅಶೋಕ್ ನರೋಡೆ ಪರಿಚಯಿಸಿದರು. ವಿ. ಎ. ಅಡಹಳ್ಳಿ ವಂದಿಸಿದರು. ಟಿ. ಡಿ. ಡಂಗಿ ಮತ್ತು ಕುಮಾರಿ ಎಸ್. ಟಿ. ದಿವಾನಜಿ ನಿರೂಪಿಸಿದರು.