ಕ್ರೀಡಾ ದಿನಾಚರಣೆ ನಿಮಿತ್ತ ಬಾಸ್ಕೆಟ್‌ಬಾಲ್, ಹಾಕಿ ಪಂದ್ಯಾಟ ವಿಜೇತರ ವಿವರ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕ್ರೀಡಾ ದಿನಾಚರಣೆ ನಿಮಿತ್ತ ಭಾನುವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹಾಕಿ ಹಾಗೂ ಬಾಸ್ಕೆಟ್‌ಬಾಲ್ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ತಂಡಗಳು ಪಾಲ್ಗೊಂಡಿದ್ದವು.
ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಬಾಲಕರ ೧೨ ಹಾಗೂ ಬಾಲಕಿಯರ ೮ ಸೇರಿ ಒಟ್ಟು ೨೦ ಟೀಮ್‌ಗಳು ಪಾಲ್ಗೊಂಡಿದ್ದವು. ಇದು ದಾಖಲೆಯ ತಂಡಗಳ ಸಂಖ್ಯೆಯಾಗಿದೆ.
ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಬಾಲಕರ ವಿಭಾಗದಲ್ಲಿ ಎಸ್‌ಆರ್‌ಎನ್ ಮೆಹ್ತಾ (ಸ್ಟೇಟ್) ವಿನ್ನರ್ ಹಾಗೂ ಅಕ್ಕಮಹಾದೇವಿ ಕಾಲನಿ ತಂಡ ರನ್ನರ್ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಎಸ್‌ಆರ್‌ಎನ್ ಮೆಹ್ತಾ (ಸಿಬಿಎಸ್‌ಇ) ವಿನ್ನರ್, ವಾಡಿಯ ಡಿಎಬಿ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಹಾಕಿ ಪಂದ್ಯಾಟದಲ್ಲಿ ಬಾಲಕರ ೧೦, ಬಾಲಕಿಯರ ೨ ಸೇರಿ ೧೨ ಟೀಮ್‌ಗಳು ಭಾಗವಹಿಸಿದ್ದವು. ಬಾಯ್ಸ್ ವಿಭಾಗದಲ್ಲಿ ಸೆಂಟ್ ಜೋಸೆಫ್ ವಿನ್ನರ್, ತಾರಫೈಲ್ ಬಡಾವಣೆಯ ಸರ್ಕಾರಿ ಪ್ರೌಢ ಶಾಲೆ ರನ್ನರ್ ಹಾಗೂ ಬಾಲಕಿಯರ ವಿಭಾಗದಲ್ಲಿ ತಾರಫೈಲ್ ಸರ್ಕಾರಿ ಪ್ರೌಢ ಶಾಲೆ ವಿನ್ನರ್, ರೋಟರಿ ಪ್ರಾಥಮಿಕ ಶಾಲೆ ರನ್ನರ್ ಸ್ಥಾನ ಪಡೆಯಿತು. ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ೨೯ರಂದು ನಡೆಯಲಿರುವ ರಾಷ್ಟಿçÃಯ ಕ್ರೀಡಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.