ಜಿಲ್ಲೆ

ಅಪಾಯ ಆಹ್ವಾನಿಸುತ್ತಿದೆ ತೆರದ ಕೊಳವೆಬಾವಿ

Chikkamagaluru

ಮೂಡಿಗೆರೆ: ಪಟ್ಟಣದ ಪರಿಮಳಮ್ಮ ದೇವಸ್ಥಾನದ ಹಿಂದೆ ಹಳೆಯ ಕೊಳವೆಬಾವಿ ಬಾಯಿ ತೆರೆದುಕೊಂಡು ಅಪಾಯ ಆಹ್ವಾನಿಸುತ್ತಿದೆ.

ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಮಕ್ಕಳು ಕೂಡ ಅಧಿಕ ಸಂಖ್ಯೆಯಲ್ಲಿ ದೇವಸ್ಥಾನದ ಆವರಣದಲ್ಲಿ ಆಟವಾಡುತ್ತಾರೆ. ಪಕ್ಕದಲ್ಲೇ ಬಾಲಕಿಯರ ಪ್ರೌಢಶಾಲೆ, ಪಿಯುಸಿ ಕಾಲೇಜು ಇದ್ದರೂ ಪಪಂ ಅಧಿಕಾರಿಗಳು ಕಂಡೂ ಕಾಣದಂತೆ ಕುಳಿತಿದ್ದಾರೆ. ಈ ಹಿಂದೆ ರಾಜ್ಯದ ವಿವಿಧೆಡೆ ತೆರೆದ ಕೊಳವೆಬಾವಿಯೊಳಗೆ ಚಿಕ್ಕ ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿದ್ದರೂ ಅಧಿಕಾರಿಗಳು ಮಾತ್ರ ತೆರೆದ ಕೊಳವೆಬಾವಿ ಮುಚ್ಚಲು ಮುಂದಾಗಿಲ್ಲ.

ಪಟ್ಟಣದ ಮಧ್ಯ ಭಾಗದಲ್ಲೇ ಇಂಥ ಅನಾಹುತ ಸಂಭವಿಸಬಹುದಾದ ಅಪಾಯಕಾರಿ ತೆರೆದ ಕೊಳವೆಬಾವಿ ಇದ್ದರೂ ಮುಚ್ಚದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಬೋರ್​ವೆಲ್ ಮುಚ್ಚಬೇಕು.