ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಮುಚ್ಚದ ನಿರುಪಯುಕ್ತ ಖಾಸಗಿ ಕೊಳವೆಬಾವಿಗಳನ್ನು ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿಯಾಗಿ ರೈತರು ಜಮೀನುಗಳಲ್ಲಿ ಕೊರೆಸುವ ಕೊಳವೆಬಾವಿಗಳ ಬಗ್ಗೆ ಸ್ಥಳೀಯ ಆಡಳಿತಕ್ಕೂ ಮಾಹಿತಿ ಇರುವುದಿಲ್ಲ. ಇದರಿಂದ ಕೊಳವೆಬಾವಿ ಕೊರೆದ ಮೇಲೆ ಅದು ನಿರುಪಯುಕ್ತವಾದರೆ ಅಂಥ ಕೊಳವೆಬಾವಿಗಳನ್ನು ಮುಚ್ಚದಿರುವ ಬಗ್ಗೆ ಆಯಾ ಪಂಚಾಯಿತಿಯ ಅರಿವಿಗೂ ಬರುತ್ತಿಲ್ಲ ಎನ್ನಲಾಗಿದೆ. ಏತನ್ಮಧ್ಯೆ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದು ಅಧಿಕಾರಿಗಳಿಗೆ ತಲೆಬೇನೆ ತರಿಸಿದೆ. ಗ್ರಾಮಗ್ರಾಮಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮಾಹಿತಿಗೆ ಅಧಿಕಾರಿಗಳು ಮೊರೆ ಹೋಗಿದ್ದಾರೆ.
ತಕ್ಷಣ ಮಾಹಿತಿ ನೀಡಿ: ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬೋರ್‌ವೆಲ್ ಕೊರೆಸಿ ಕೇಸಿಂಗ್ ಹಾಕದೆ ಅಥವಾ ಕೇಸಿಂಗ್ ಹಾಕಿದ್ದರೂ ಪಂಪ್ ಮೋಟಾರ್ ಬಿಡದೆ ತೆರೆದ ಸ್ಥಿತಿಯಲ್ಲಿರುವ ಅಥವಾ ಕೊರೆದ ಮೇಲೆ ನಿರುಪಯುಕ್ತವೆಂದು ಯಥಾಸ್ಥಿತಿಯಲ್ಲಿ ಬಿಟ್ಟಿರುವುದು ಕಂಡುಬಂದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬಹುಮಾನ ೋಷಣೆ ವಿಜಯಪುರದಲ್ಲಿ ಇತ್ತೀಚಿಗೆ ನಡೆದ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ರ್ಮಾನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಒಂದು ಹೆಜ್ಜೆ ಮುಂದೆಹೋಗಿರುವ ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಯವಾಗಿ ನಗದು ಬಹುಮಾನ ೋಷಿಸಿದ್ದಾರೆೆ. ಖಾಸಗಿ ಜಮೀನುಗಳಲ್ಲಿ ಎಲ್ಲಿಯಾದರೂ ತೆರೆದ ಸ್ಥಿತಿಯಲ್ಲಿರುವ ಕೊಳವೆಬಾವಿ ಕಂಡುಬಂದರೆ ತಕ್ಷಣ ವಿಡಿಯೋ ಸಹಿತ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ೋಷಿಸಿದೆ.
ಅಲ್ಪ ಇಳುವರಿ ಬೋರ್‌ವೆಲ್ ಪ್ರಸ್ತುತ ಡಿಸಿ ಆದೇಶದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ತಪಾಸಣೆ ನಡೆಸಿರುವ ಅಧಿಕಾರಿಗಳಿಗೆ ತೆರೆದ ಸ್ಥಿತಿಯಲ್ಲಿರುವಂಥ ಕೊಳವೆಬಾವಿಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಆಳದ ಕೊಳವೆಬಾವಿಗಳು ಹೆಚ್ಚು ಕಂಡುಬರುತ್ತವೆ. ಒಂದು ಇಂಚು, ಒಂದೂವರೆ ಇಂಚು ನೀರು ಸಿಕ್ಕರೂ ರೈತರು ಆ ಕೊಳವೆಬಾವಿಗಳನ್ನು ನೀರಾವರಿಗೆ ಬಳಸುತ್ತಾರೆ. ಇಂಥಹುದಕ್ಕೆ ಅಲ್ಪ ಇಳುವರಿ ಕೊಳವೆಬಾವಿಗಳೆನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರುಪಯುಕ್ತ ಕೊಳವೆಬಾವಿಗಳು ಕಂಡುಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಚ್ಚದಿದ್ದರೆ ಕ್ರಿಮಿನಲ್ ಕೇಸ್ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚದ ಕೊಳವೆಬಾವಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಎಚ್ಚರಿಕೆ ನೀಡಿದ್ದಾರೆ. ಜಮೀನುಗಳಲ್ಲಿ ಅಥವಾ ಇನ್ಯಾವುದೇ ಪ್ರದೇಶದಲ್ಲಿ ನೀರಿಗಾಗಿ ಕೊಳವೆಬಾವಿ ಕೊರೆದು ನೀರು ಸಿಗದಿದ್ದ ಸಂದರ್ಭದಲ್ಲಿ ಅಂಥ ಕೊಳವೆಬಾವಿಗಳನ್ನು ಮುಚ್ಚದೆ ಅಥವಾ ನೆಲಸಮ ಮಾಡದೆ ಇರುವುದರಿಂದ ಮಕ್ಕಳು ಇಂಥ ಕೊಳವೆಬಾವಿಗಳಿಗೆ ಬಿದ್ದು ಪ್ರಾಣಕ್ಕೆ ಸಂಚಾಕಾರ ತಂದುಕೊಂಡಿರುವ ಹಲವಾರು ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಕೊರೆದಿರುವ ಅಥವಾ ಕೊಳವೆಬಾವಿಗಳಲ್ಲಿ ನೀರು ಸಿಗದೆ ಇದ್ದ ಸಂದರ್ಭದಲ್ಲಿ ಅಥವಾ ನೀರು ಬತ್ತಿಹೋಗಿ ಅಳವಡಿಸಿರುವ ಪಂಪು, ಮೋಟಾರ್, ಕೇಸಿಂಗ್‌ಗಳನ್ನು ತೆಗೆದ ಸಂದರ್ಭದಲ್ಲಿ ಕೂಡಲೇ ಅವುಗಳನ್ನು ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ 2 ವರ್ಷದ ಮಗು ತೆರೆದ ಕೊಳವೆಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದ ಪ್ರಕರಣ ರಾಜ್ಯದಲ್ಲಿ ದೊಡ್ಡ ಸುದ್ದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರುಪಯುಕ್ತ ಕೊಳವೆಬಾವಿಗಳನ್ನು ತೆರೆದ ಸ್ಥಿತಿಯಲ್ಲಿಟ್ಟಿರುವ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ವಿವಿಧೆಡೆ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ನಡೆಸಲಾಗಿದೆ. ಅಲ್ಲದೆ ಸಾರ್ವಜನಿಕವಾಗಿ ಇಲಾಖೆ ವತಿಯಿಂದ ಈ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ತಪಾಸಣೆಯಲ್ಲಿ ಎಲ್ಲಿಯೂ ತೆರೆದ ಸ್ಥಿತಿಯಲ್ಲಿರುವ ಕೊಳವೆಬಾವಿಗಳು ಕಂಡುಬಂದಿಲ್ಲ. ಎಲ್ಲಿಯಾದರೂ ಸಾರ್ವಜನಿಕರ ಗಮನಕ್ಕೆ ಬಂದರೆ 080-22221050 ಮಾಹಿತಿ ನೀಡಬಹುದು.
ಸುಭಾನ್ ಸಾಬ್, ಕಾರ್ಯಪಾಲಕ ಇಂಜಿನಿಯರ್, ಕುಡಿವ ನೀರು ಇಲಾಖೆ