ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ತಾಲೂಕಿನ ಗೌಡಸಂದ್ರದಲ್ಲಿ ಬುಧವಾರ ರಾತ್ರಿ ಹತ್ತಕ್ಕೂ ಹೆಚ್ಚು ರೈತರ ಕೊಳವೆ ಬಾವಿಗಳ ಕೇಬಲ್ ಕಳವಾಗಿವೆ.
ಕೊಳವೆ ಬಾವಿಗಳ ಪಂಪ್ ಮೋಟಾರ್ ಕೇಬಲ್ನಲ್ಲಿ ತಾಮ್ರದ ತಂತಿಯಿರುವುದರಿಂದ ಪದೇಪದೆ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. 1 ಮೀಟರ್ ಕೇಬಲ್ ಬೆಲೆ 230 ರೂಪಾಯಿಗೂ ಅಧಿಕವಿದ್ದು, ಕಳ್ಳರು ಕೇಬಲ್ ಕದ್ದು ಅರ್ಧ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಗೌಡಸಂದ್ರ ಗ್ರಾಮದಲ್ಲಿ ಕೊಳವೆ ಬಾವಿಗಳ ಜತೆಗೆ ಸರ್ಕಾರದ ಕುಡಿಯುವ ನೀರು ಸರಬರಾಜಿನ ಕೇಬಲ್ ಹಾಗೂ ಒಂದು ಬಾವಿಗೆ ಅಳವಡಿಸಿದ್ದ ಕೇಬಲ್ ಸಹ ಕಳವು ಮಾಡಲಾಗಿದೆ. ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮದ ದೇವರಾಜು, ಗೋವಿಂದ್ ರೆಡ್ಡಿ, ನಂಜುಂಡೇಗೌಡ, ಗಂಗಪ್ಪ, ನಂಜುಂಡ, ಸಿದ್ದಲಿಂಗಪ್ಪ, ಚಿಕ್ಕಗಂಗಪ್ಪ ಹಾಗೂ ಇತರರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.