ಬೆಟಗೇರಿ ಜೆಸ್ಕಾಂ ಕಚೇರಿ ಎದುರು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ರೈತರಾದ ಹನುಮಂತ ಬೇಲಡಗಿ, ಬಸಪ್ಪ ಹೂಗಾರ, ಶಿವಪುತ್ರಪ್ಪ ಗಾಂಜಿ, ಉಮೇಶ ಹೂಗಾರ, ಯಮನೂರಪ್ಪ ಕಾಯಿಗಡ್ಡಿ, ಮಲ್ಲಪ್ಪ ಯತ್ನಳ್ಳಿ, ಮಹೇಶ ಕವಲೂರು, ಮುತ್ತಣ್ಣ ಬಳ್ಳೊಳ್ಳಿ, ಏಳುಕೋಟೇಶ ಇದ್ದರು. 
ಜಿಲ್ಲೆ

ಬೋರ್‌ವೆಲ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿ

Kopala - Desk - Eraveni

ಅಳವಂಡಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಟಗೇರಿ ಗ್ರಾಮದ ರೈತರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿದ್ಯುತ್ ವಿತರಣಾ ಕೇಂದ್ರದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ಕೇಂದ್ರದಿಂದ ಮೋರನಾಳ ಫೀಡರ್‌ಗೆ ಪೂರೈಕೆಯಾಗುವ ವಿದ್ಯುತ್ ಕಡಿಮೆ ವೋಲ್ಟೇಜ್ ಇರುವುದರಿಂದ ಬೋರ್‌ವೆಲ್‌ಗಳು ಆರಂಭವಾಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರು ಹರಿಸುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ರೈತರ ಸಮಸ್ಯಗಳಿಗೆ ಸ್ಪಂದಿಸಿದ ಎಸ್‌ಒ ಭೀಮಾ ನಾಯಕ್, ಮೋರನಾಳ ಫೀಡರ್‌ಗೆ ಸಮರ್ಪಕ ವಿದ್ಯುತ್ ಹಾಗೂ ನಿಯಮಿತ ವೋಲ್ಟೇಜ್‌ನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ರೈತರಾದ ಹನುಮಂತ ಬೇಲಡಗಿ, ಬಸಪ್ಪ ಹೂಗಾರ, ಶಿವಪುತ್ರಪ್ಪ ಗಾಂಜಿ, ಉಮೇಶ ಹೂಗಾರ, ಯಮನೂರಪ್ಪ ಕಾಯಿಗಡ್ಡಿ, ಮಲ್ಲಪ್ಪ ಯತ್ನಳ್ಳಿ, ಮಹೇಶ ಕವಲೂರು, ಮುತ್ತಣ್ಣ ಬಳ್ಳೊಳ್ಳಿ, ಏಳುಕೋಟೇಶ ಇತರರು ಇದ್ದರು.