ಜಿಲ್ಲೆ

ಬೋರಗಾಂವ ಅಭಿವೃದ್ಧಿಗೆ ಬದ್ಧ

ಬೋರಗಾಂವ: ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಅನುದಾನ ತರುವ ಮೂಲಕ ಸಹೋದರ ಉತ್ತಮ ಪಾಟೀಲ ಬೋರಗಾಂವ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಉದ್ಯಮಿ ಅಭಿನಂದನ ಪಾಟೀಲ ಹೇಳಿದರು.

ಪಟ್ಟಣದ ವಾರ್ಡ್ ನಂ.16ರಲ್ಲಿ 28 ಲಕ್ಷ ರೂ. ಮೊತ್ತದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣಕ್ಕೆ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಪಪಂ ಸದಸ್ಯ ಮಾಣಿಕ ಕುಮಾರ ಮಾತನಾಡಿ, ಮುಖ್ಯರಸ್ತೆಗೆ ನಿರ್ಮಾಣಕ್ಕೆ 28 ಲಕ್ಷ ರೂ. ಮಂಜೂರಾಗಿದೆ ಎಂದರು. ಪಪಂ ಅಧ್ಯಕ್ಷ ಪಿಂಟು ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಪೊರೇಟರ್ ಶೋಭಾ ಹಾವಲೆ ಹಾಗೂ ಗಣ್ಯರು ಜೆಸಿಬಿ ಯಂತ್ರಕ್ಕೆ ಪೂಜೆ ಸಲ್ಲಿಸಿದರು. ಪಪಂ ಉಪಾಧ್ಯಕ್ಷೆ ಭಾರತಿ ವಾಸವಾಡೆ, ಸದಸ್ಯ ಅಭಯಕುಮಾರ ಮಗದುಮ್, ಶೋಭಾ ಹಾವಲೆ , ಜಾವೇದ್ ಮಕಾಂದರ, ರಾಜು ಖೋತ್, ಸತ್ಯಪ್ಪ ಏಕಾರೆ, ಕರಿಯಪ್ಪ ಗಾವಡೆ, ಶಿವಾಜಿ ತೋಡಕರ್, ಬಾಳಾಸಾಹೇಬ ವಾಸವಾಡೆ, ಶಿವಾಜಿ ಕೊರವಿ, ದಿಗಂಬರ ಕಾಂಬಳೆ, ಸಂಜಯ ಸಾಲ್ವಿ, ದಿಲೀಪ ಮಹಾಜನ್, ರಾವಸಾಹೇಬ ಚಿಗರೆ, ಸರ್ದಾರ್ ಚೋಕಾವೆ, ಅಶೋಕ ಕುಂಬಾರ, ಸೋಮನಾಥ ಮಾಳಿ ಇತರರಿದ್ದರು.