ಮಡಿಕೇರಿ:
ಮೈಸೂರು ಮುಡಾ ನಿವೇಶನ ಹಗರಣ ಮತ್ತು ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಒತ್ತಾಯಿಸಿದ್ದಾರೆ.
ತಮ್ಮ ಪತ್ನಿಗೆ ಸಹೋದರನಿಂದ ಉಡುಗೊರೆಯಾಗಿ ಬಂದಿದ್ದ ಜಮೀನು ಅವರ ಗಮನಕ್ಕೆ ಬಾರದೆ ಮುಡಾ ಸ್ವಾದೀನ ಪಡಿಸಿಕೊಂಡಿತ್ತು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 3.16 ಎಕರೆ ಜಮೀನನ್ನು ಮುಡಾ ಕಾನೂನುಬಾಹಿರವಾಗಿ ಸ್ವಾದೀನಪಡಿಸಿಕೊಂಡಿತ್ತು ಎನ್ನುವುದು ಅವರ ವಾದ. ಆದರೆ ಮುಡಾದಿಂದ ನಿವೇಶನ ಯೋಜನೆ ರೂಪಿಸುವಾಗ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇಷ್ಟಾದರೂ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರೊಬ್ಬ ಪ್ರಭಾವಿ ರಾಜಕಾರಣಿ, ಮೇಲಾಗಿ ವಕೀಲರೂ ಆಗಿರುವ ಸಿದ್ದರಾಮಯ್ಯ ಅವರೇ ಅಕ್ರಮ ನಡೆದಿದೆ ಎಂದು ಹೇಳಿದರೆ ನಂಬುವುದು ಹೇಗೆ? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ನಿಯಮದ ಪ್ರಕಾರ ಸಿದ್ದರಾಮಯ್ಯ ಪತ್ನಿಗೆ 2 ನಿವೇಶನ ಕೊಡಬೇಕು. ಆದರೆ 14 ನಿವೇಶನ ಕೊಡಲಾಗಿದೆ. ಪ್ರಕರಣದ ತನಿಖೆಯನ್ನು ಐಎಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ಆದರೆ ಮುಖ್ಯಮಂತ್ರಿ ಕೈಕೆಳಗಿನ ಅಧಿಕಾರಿಗಳು ಏನು ವರದಿ ಕೊಡಬಹುದು ಎನ್ನುವುದನ್ನು ಯಾರು ಬೇಕಾದರೂ ನಿರೀಕ್ಷೆ ಮಾಡಬಹುದು. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಕ್ಲೀನ್ ಚಿಟ್ ಸಿಗುವ ತನಕ ಮುಖ್ಯಮಂತ್ರಿ ಅಧಿಕಾರ ತ್ಯಜಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆಗೆ ಸಂಬAಧಿಸಿದAತೆ ಇಷ್ಟು ಬೃಹತ್ ಮೊತ್ತವನ್ನು ವರ್ಗಾ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಬೇಕು. ಆರ್ಥಿಕ ಇಲಾಖೆ ಸಿದ್ದರಾಮಯ್ಯ ಕೈಯಲ್ಲಿ ಇದೆ. ಹಾಗಾಗಿ ಅವರ ಅರಿವೆ ಬಾರದೆ ಈ ವರ್ಗಾವಣೆ ನಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಕ್ರಿಯ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ದೇಶದ ಗಮನ ಸೆಳೆದಿರುವ ಎರಡೂ ಹಗರಣಕ್ಕೆ ಸಂಬAಧಿದAತೆ ಸಿಎಂ ರಾಜೀನಾಮೆ ಕೊಡಲೇಬೇಕು. ಹಗರಣದ ಆರೋಪ ಎದುರಿಸಲು ಸಾಧ್ಯವಾಗದೇ ಸರ್ಕಾರ ಪ್ರತಿಭಟನೆಗೆ ಹೊರಟವರ ಬಂಧನ ಮಾಡುತ್ತಿದೆ. ಪ್ರತಿಭಟನೆಗಳಿಗೆ ಅವಕಾಶ ಕೊಡದೇ ಬಿಜೆಪಿ ಕಾರ್ಯಕರ್ತರ ಸ್ಥೆöÊರ್ಯ ಕುಗ್ಗಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ಕಾರ್ಯದರ್ಶಿ ಚಲನ್‌ಕುಮಾರ್ ಇದ್ದರು.