ಜಿಲ್ಲೆ

ಕುಂಜಾಲು ಶಾಲೆ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

ಬ್ರಹ್ಮಾವರ: ಕುಂಜಾಲುವಿನ ವಿಶ್ವ ಕೀರ್ತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೈಸೂರಿನ ಯುವ ಉದ್ಯಮಿ ಎಂ.ಎಸ್.ಮಂಜು ಅವರು ನೀಡಿದ ಪುಸ್ತಕ, ಲೇಖನ ಸಾಮಗ್ರಿ, ಕಂಪ್ಯೂಟರ್, ಯುಪಿಎಸ್ ಮತ್ತು ಬೆಂಗಳೂರಿನ ಉದ್ಯಮಿ ರವೀಂದ್ರ ರಾವ್ ನೀಡಿದ ಸ್ಕೂಲ್ ಬ್ಯಾಗ್ ಮತ್ತು ಕೊಡೆಗಳ ವಿತರಣಾ ಕಾರ್ಯಕ್ರಮ ಗುರುವಾರ ಜರುಗಿತು.

ಶಾಲೆ ನಿವೃತ್ತಶಿಕ್ಷಕ ಪಾಂಡುರಂಗ ನಾಯ್ಕ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ರಾವೇಂದ್ರ ಸಾಮಗ, ಉಡುಪಿ ರೋಟರಿ ಅಧ್ಯಕ್ಷ ಗುರುರಾಜ್ ಭಟ್, ನೀಲಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಪೂಜಾರಿ, ಅಭಿವೃದ್ಧಿ ಅಧಿಕಾರಿ ಗೀತಾ ಬಾಳಿಗ, ಮುಖ್ಯ ಶಿಕ್ಷಕ ಬಾಲಚಂದ್ರ ಶೆಟ್ಟಿ, ಶಿಕ್ಷಕಿ ಸುಮನಾ ಉಪಸ್ಥಿತರಿದ್ದರು.