ಕಲಬುರಗಿ : ಕುರಿಕೋಟಾ ದ ವೀರೇಶ್ವರ ಪ್ರಕಾಶನ ವತಿಯಿಂದ ಶಿಕ್ಷಕರು ಹಾಗೂ ಯುವ ಸಾಹಿತಿಗಳಾದ ಅಂಬಾರಾಯ ಮಡ್ಡೆಯವರು ರಚಿಸಿದ ಬಡವನ ಗುಡಿಸಲು ಪುಸ್ತಕ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭ ದಿನಾಂಕ 23.03.2025 ರಂದು ಕುರಕೋಟಾದ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ನಡೆಯಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ ಸಾನಿಧ್ಯವನ್ನು ಸುಕ್ಷೇತ್ರ ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಹಾಗೂ ಕಳ್ಳಿ ಮಠದ ಶ್ರೀ ವಿರೂಪಾಕ್ಷ ದೇವರು ವಹಿಸಲಿರುವ ಕಾರ್ಯಕ್ರಮವನ್ನು ಗ್ರಾಮೀಣ ಮತಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಬಸವರಾಜ ಮತ್ತಿಮಡುರವರು ಉದ್ಘಾಟಿಸಲಿದ್ದಾರೆ. ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.ಶ್ರೀಮತಿ ಕರುಣಾ ಸಲಗರ್ ಅವರು ಕೃತಿ ಕುರಿತು ಮಾತನಾಡು ತಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀ ಸುಭಾಷ ಚಂದ್ರ ಕಶೆಟ್ಟಿ ಬಾಚನಾಳ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಶಿವಪ್ರಭು ಪಾಟೀಲ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೈಜನಾಥ ತಡಕಲ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸೋಮಶೇಖರ ಹಂಚಿನಾಳ ಹಿರಿಯ ನ್ಯಾಯವಾದಿಗಳಾದ ಶ್ರೀ ಶಿವಕುಮಾರ ಪಸಾರ ಉದ್ದಿಮೆದಾರರಾದ ಮಲ್ಲಿಕಾರ್ಜುಕರ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಪರಮೇಶ್ವರ ಓಕಳಿ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಗಪ್ಪ ದೊರೆ, ಜ್ಞಾನ ಜ್ಯೋತಿ ಕರಿಯರ್ ಅಕಾಡೆಮಿಯ ಶ್ರೀ ಏನ್. ಎಸ್. ಹಿರೇಮಠ, ಆಗಮಿಸಲಿದ್ದು ಕಾರ್ಯಕ್ರಮ ಅಧ್ಯಕ್ಷತೆಯನ್ನು ಕುರಿಕೋ ಟಾದ ಹಿರಿಯರಾದ ಸಂಗಣ್ಣ ಚೀಲಶೆಟ್ಟಿ ಅವರು ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಂಬಾರಾಯ ಮಡ್ಡೆ ಅವರು ತಿಳಿಸಿದ್ದಾರೆ.