ಜಿಲ್ಲೆ

ಪುಸ್ತಕ ಬಿಡುಗಡೆ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾಹಿತ್ಯ ಗಂಗಾ ಧಾರವಾಡ, ಸುಬಿಂದು ಪ್ರಕಾಶನದ ಸಹಯೋಗದಲ್ಲಿ ಡಿ. 29ರಂದು ಸಂಜೆ 5 ಗಂಟೆಗೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಸುನಂದಾ ಬೆಳಗಾಂವಕರ ವ್ಯಕ್ತಿತ್ವ-ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ.

ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ ಕೃತಿ ಬಿಡುಗಡೆ ಮಾಡುವರು. ವಿಕಾಸ ಹೊಸಮನಿ ಕೃತಿ ಕುರಿತು ಮಾತನಾಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಕೃತಿ ಲೇಖಕ ಡಾ. ಸುಭಾಷ ಪಟ್ಟಾಜೆ, ಶ್ರೀನಿವಾಸ ವಾಡಪ್ಪಿ, ಡಾ. ವೈಜಯಂತಿ ಸೂರ್ಯನಾರಾಯಣ ಮತ್ತು ಸೀಮಾ ಕುಲಕರ್ಣಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.