ಜಿಲ್ಲೆ

ಪುಸ್ತಕ ಬಿಡುಗಡೆ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಪ್ರೊ. ಎಸ್​.ಸಿ. ಪಾಟೀಲ ಜನ್ಮದಿನ ನಿಮಿತ್ತ ಜು. 25ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಹಳಿಯಾಳ ರಸ್ತೆಯ ಡಾ. ಎಸ್​.ಸಿ. ಪಾಟೀಲ ಆರ್ಟ್​ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾಗೂ ಕರ್ನಾಟಕದ ದೃಶ್ಯಕಲಾ ಧೀಮಂತರು ಗ್ರಂಥ ಲೋಕಾರ್ಪಣೆ ಏರ್ಪಡಿಸಲಾಗಿದೆ ಎಂದು ಲೇಖಕ ಎಸ್​.ಸಿ. ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಗ್ರಂಥ ಬಿಡುಗಡೆಗೊಳಿಸುವರು. ಡಾ. ಬಸವರಾಜ ಕಲೆಗಾರ ಗ್ರಂಥಾವಲೋಕನ ಮಾಡುವರು. ಅತಿಥಿಯಾಗಿ ಬಿ. ಮಾರುತಿ ಆಗಮಿಸುವರು. ಕರಿಯಪ್ಪ ಹಂಚಿಮನಿ ಹಾಗೂ ಶಾಂತಾ ಕೊಲ್ಲಿ ಅವರಿಗೆ ಸನ್ಮಾನಿಸಲಾಗುವುದು. ಎಂ.ಎಸ್​. ಚೌಧರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಎಸ್​.ಬಿ. ಕುರುವತ್ತಿ, ಶಶಿಕಲಾ ಪಾಟೀಲ, ಎಸ್​.ಬಿ. ಹಿರೇಮಠ, ಬಸವರಾಜ ಕುರಿಯವರ, ವೆಂಕಟೇಶ, ಇತರರು ಇದ್ದರು.