ಧಾರವಾಡ: ರೋಗಕ್ಕೀಡಾದವರ ಜೀವ ಉಳಿಸಲು ವೈದ್ಯರು ಬೇಕು. ಒತ್ತಡದಲ್ಲಿ ಕಾಲ ಕಳೆಯುವ ವೈದ್ಯರು ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಅವರು ಬರೆದ ನಿಗೂಢ ಜೀವನ' ಮತ್ತುಜೀವನ ಒಂದು ಪಾಠಶಾಲೆ' ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂತ ಕಬೀರದಾಸ ರವರು ಹೇಳಿದಂತೆ `ನೀವು ಹುಟ್ಟಿದಾಗ ಅಳುತ್ತೀರಿ ಮತ್ತು ನಿಮ್ಮ ಸುತ್ತಲಿನ ಜನ ಸಂತೋಷ ಪಡುತ್ತಾರೆ'. ಅದೇರೀತಿ ನೀವು ಸತ್ತಾಗ ಜಗತ್ತು ಅಳಬೇಕು. ಅಂತಹ ಶುದ್ಧ ಕಾರ್ಯಗಳನ್ನು ಮಾಡಬೇಕು ಎಂದರು.
ಕೃತಿಕಾರ ಡಾ. ಡಾ. ರಾಜನ್ ದೇಶಪಾಂಡೆ ಮಾತನಾಡಿ, ಕೋವಿಡ್ ಅವಽಯಲ್ಲಿ ಅನುಭವಿಸಿದ ನೋವು ಹಾಗೂ ಕಷ್ಟಗಳು ಪುಸ್ತಕಗಳನ್ನು ಬರೆಯಲು ಪ್ರೇರಣೆಯಾದವು. ನನ್ನೊಳಗಿನ ಜಾಗೃತಿ ಲೇಖಕರನ್ನಾಗಿ ಮಾರ್ಪಾಡು ಮಾಡಿತು ಎಂದರು.
ಚಿAತಕ ಡಾ. ವಿ.ಟಿ. ನಾಯಕ್, ಸಾಹಿತ್ಯ ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ, ಸಿ.ಯು. ಬೆಳ್ಳಕ್ಕಿ, ಇತರರಿದ್ದರು.
ಮಹಾಮನಿ ಹಾಗೂ ನರಸಿಂಹ ಜೋಶಿ ಅವರು ಹಾಸ್ಯದ ಹೊನಲು ಹರಿಸಿದರು. ಡಾ. ಸ್ನೇಹಾ ಜೋಶಿ ನಿರೂಪಿಸಿದರು. ಡಾ. ವೈ.ಪ. ಕಲ್ಲನಗೌಡರ ವಂದಿಸಿದÀರು.