ಜಿಲ್ಲೆ

ನಾನ್ಯಾರು ಕೃತಿ ಬಿಡುಗಡೆ

ಎ. ಆರ್. ರಘುರಾಮ

ಚನ್ನರಾಯಪಟ್ಟಣ : ಸತತ ಪ್ರಯತ್ನವಿದ್ದರೆ ಮಾತ್ರ ಯಾವುದೇ ರಂಗದಲ್ಲಿ ಸಾಧನೆ ಸುಲಭ ಎಂದು ರಂಗ ನಿರ್ದೇಶಕ ಜನಾರ್ದನ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಲೇಖಕ ಎಚ್.ಡಿ.ವೆಂಕಟೇಶ್ ಪ್ರಸಾದ್ ವಿರಚಿತ ‘ನಾನ್ಯಾರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಡತನ, ಸಮುದಾಯ, ಕೆಳವರ್ಗದ ಚಿಂತನೆಯ ಕೃತಿಗಳು ಪ್ರಕಟಣೆ ಭಾಗ್ಯ ಕಾಣುವುದು ಬಹಳ ಕಷ್ಟ. ಹಾಗಿದ್ದೂ ಯಾರ ಸಹಾಯವನ್ನೂ ನಿರೀಕ್ಷೆ ಮಾಡದೇ ಕೃತಿ ಪ್ರಕಟಿಸಿರುವುದು ವೆಂಕಟೇಶ್ ಪ್ರಸಾದ್ ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. ಕವಿ ಸುಬ್ಬು ಹೊಲಯರ್ ಪುಸ್ತಕ ಕುರಿತು ಮಾತನಾಡಿ, ಈ ಕೃತಿ ಸಮಾನತೆಯನ್ನು ಬಿತ್ತುವ ಕೆಲಸ ಮಾಡಿದೆ. ಮಡಿವಂತಿಕೆಯ ಸೂಕ್ಷ್ಮತೆ ತಿಳಿಸಿದೆ ಎಂದರು.
ನಾಟಕಕಾರ ಡಾ.ಚಂದ್ರು ಕಾಳೇನಹಳ್ಳಿ, ಪ್ರಾಂಶುಪಾಲ ಕೆ.ಎಂ.ಸಂತೋಷ್, ಸಾಹಿತಿ ಪ್ರೊ.ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಪರಿಸರ ಪ್ರೇಮಿ ಚ.ನಾ.ಅಶೋಕ್, ಕೃತಿಕಾರ ವೆಂಕಟೇಶ್ ಪ್ರಸಾದ್ ಇದ್ದರು.