ನೀರಲಗಿ ಗ್ರಾಮದಲ್ಲಿ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭವಾದ ಮನೆಗೊಂದು ಗ್ರಂಥಾಲಯದ ಕಾರ್ಯ ವೈಖರಿಯನ್ನು ಟಾಟಾ ಕಲಿಕೆ ಟ್ರಸ್ಟ್ ಸಂಯೋಜಕ ಮೃತ್ಯುಂಜಯ, ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ವೀಕ್ಷಿಸಿದರು. ವಿದ್ಯಾರ್ಥಿಯ ಪಾಲಕರು ಇದ್ದರು. 
ಜಿಲ್ಲೆ

ಪುಸ್ತಕ ಓದಿನಿಂದ ಜ್ಞಾನ ಹೆಚ್ಚಳ

Kopala - Desk - Eraveni

ಅಳವಂಡಿ: ಪ್ರಸ್ತುತ ಯುವ ಜನತೆ ಮೊಬೈಲ್ ಗೀಳಿಗೆ ಮಾರು ಹೋಗಿದೆ. ಇದು ಜೀವನ ಹಾಗೂ ಓದಿನ ಮೇಲೆ ಪರಿಣಾಮ ಬೀರಲಿದೆ ಎಂದು ಟಾಟಾ ಕಲಿಕೆ ಟ್ರಸ್ಟ್ ಸಂಯೋಜಕ ಮೃತ್ಯುಂಜಯ ಬನ್ನೂರು ತಿಳಿಸಿದರು.

ಸಮೀಪದ ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭವಾದ ಮನೆಗೊಂದು ಗ್ರಂಥಾಲಯ ವೀಕ್ಷಿಸಿ ಮಂಗಳವಾರ ಮಾತನಾಡಿದರು.

ಪುಸ್ತಕಗಳನ್ನು ತಲೆ ತಗ್ಗಿಸಿ ಓದಿದರೆ ಜ್ಞಾನ ಹೆಚ್ಚುತ್ತದೆ ಮತ್ತು ಜೀವನ ಪೂರ್ತಿ ತಲೆ ಎತ್ತಿ ನಡೆಯಬಹುದು. ಹೀಗಾಗಿ ಮೋಬೈಲ್ ಗೀಳು ಕಡಿಮೆ ಮಾಡಿ ಪುಸ್ತಕ ಓದಬೇಕು. ಓದಿಗೆ ಪ್ರೋತ್ಸಾಹ ನೀಡಲು ಮನೆಗೊಂದು ಗ್ರಂಥಾಲಯ ಪರಿಕಲ್ಪನೆ ಅವಶ್ಯ ಎಂದರು.

ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪುಸ್ತಕ ಬಹಳ ಮಹತ್ವ ಪಡೆಯುತ್ತಿದೆ. ಓದು ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗಲಿದೆ. ಗ್ರಂಥಾಲಯ ಸ್ಥಾಪನೆ ಮೂಲಕ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸಲಾಗುವುದು. ಟಾಟಾ ಕಲಿಕಾ ಟ್ರಸ್ಟ್‌ನಿಂದ ಆರಂಭಿಸಿರುವ ಕಲಿಕಾ ಚಟುವಟಿಕೆ ಪ್ರೇರಣೆಯಿಂದ ಶಾಲಾ ಮಕ್ಕಳು ಮನೆಗಳಲ್ಲಿನ ಮನೆ ಗ್ರಂಥಾಲಯದ ಕಾರ್ಯ ಪರಿಣಾಮಕಾರಿಯಾಗಿದೆ ಎಂದರು. ಶಿಕ್ಷಕರಾದ ಮಲ್ಲಪ್ಪ ಕುರಿ, ನೇತ್ರಾವತಿ ಆನಂದಳ್ಳಿ ಹಾಗೂ ವಿದ್ಯಾರ್ಥಿಗಳು ಇದ್ದರು.