ದೇವದುರ್ಗ ತಾಲೂಕು ಗೂಗಲ್‌ನಲ್ಲಿ ಪುಸ್ತಕ ಗೂಡನ್ನು ನರೇಗಾ ಸಹಾಯಕ ನಿರ್ದೇಶಕಿ ಮಹೇಶ್ವರಿ ಉದ್ಘಾಟಿಸಿದರು. ಪಿಡಿಒ ಗುಂಡಪ್ಪ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಅಧಿಕಾರಿ ಪಂಪಾಪತಿ, ಬಿಲ್ ಕಲೆಕ್ಟರ್ ಪರಮೇಶ ಇತರರಿದ್ದರು. 
ಜಿಲ್ಲೆ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ದೇವದುರ್ಗ: ಯುವಜನತೆ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು. ಮಸ್ತಕಕ್ಕೆ ಶಕ್ತಿ ತುಂಬುವ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕಿ ಮಹೇಶ್ವರಿ ಹೇಳಿದರು.

ಗೂಗಲ್ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದಲ್ಲಿ ಆಯೋಜಿಸಿದ್ದ ಪುಸ್ತಕ ಗೂಡು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲಿ ವಿದ್ಯಾವಂತ ಯುವಕರು ಮೊಬೈಲ್‌ಗೆ ದಾಸರಾಗುತ್ತಿದ್ದಾರೆ. ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಮಾರು ಹೋಗುವುದು ಅನಾರೋಗ್ಯಕರ ಬೆಳವಣಿಗೆ. ಇದರಿಂದ ಹೊರಬರಲು ಪಾಲಕರು ನಿಗಾವಹಿಸಬೇಕು ಎಂದರು.

ಗ್ರಾಮೀಣ ಭಾಗದ ಜನರಿಗೆ ಸ್ವಂತ ಊರಿನಲ್ಲಿ ಕೆಲಸ ನೀಡಲು ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ರೈತರು, ಕೂಲಿಕಾರರು ಹಾಗೂ ನಿರುದ್ಯೋಗಿ ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು. ರೈತರು ನಮ್ಮ ಹೊಲ ನಮ್ಮ ರಸ್ತೆ, ಬದು ನಿರ್ಮಾಣ, ಕೃಷಿಹೊಂಡ, ಇಂಗುಗುಂಡಿ, ದನದ ಶೆಡ್ ನಿರ್ಮಾಣ ಮಾಡಿಕೊಳ್ಳಬೇಕು.

ಗ್ರಾಮೀಣ ಭಾಗದ ಜನರು ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಗೂಗಲ್ ಗ್ರಾಪಂ ಪಿಡಿಒ ಗುಂಡಪ್ಪ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಅಧಿಕಾರಿ ಪಂಪಾಪತಿ, ಬಿಲ್ ಕಲೆಕ್ಟರ್ ಪರಮೇಶ ಇತರರಿದ್ದರು.