ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗನಗೌಡ ಬಸನಗೌಡ ಪಾಟೀಲ ಪ್ರತಿಷ್ಠಾನ ವತಿಯಿಂದ ಫೆ. 24ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಜೆ 5.30ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ದೇಸಾಯಿಗೌಡ ಪಾಟೀಲ ರಚಿಸಿದ ಶ್ರೀ ಕ್ಷೇತ್ರ ಕೋಡಿಮಠದ ಸದ್ಗುರುವರ್ಯರ ದಿವ್ಯಕೃಪೆ ಪುಸ್ತಕ ಲೋಕಾರ್ಪಣೆ ಮಾಡಲಾಗುವುದು ಎಂದು ನಿವೃತ್ತ ಶಿಕ್ಷಣಾಧಿಕಾರಿ ಸೋಮಲಿಂಗ ಉಳ್ಳಿಗೇರಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾನಿಧ್ಯ ವಹಿಸುವ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ಅತಿಥಿಗಳಾಗಿ ಎ.ಬಿ. ಪಾಟೀಲ, ಡಾ. ಎಂ.ಪಿ. ನಾಡಗೌಡ, ಮಹಾದೇವ ಹೊರಟ್ಟಿ, ಜಗನ್ನಾಥಗೌಡ ಸಿದ್ದನಗೌಡ್ರ, ಸಿ.ಎಸ್. ಪಾಟೀಲ. ಡಾ. ಎಸ್.ಆರ್. ರಾಮನಗೌಡರ, ಡಾ. ಎ.ಆರ್. ಪಾಟೀಲ ಆಗಮಿಸುವರು ಎಂದರು.
ಡಾ. ಮಲ್ಲಿಕಾರ್ಜುನ ಪಾಟೀಲ ಗ್ರಂಥ ಪರಿಚಯ ಮಾಡುವರು. ಪ್ರೊ. ಸಿ.ಎಂ. ಕುಂದಗೋಳ ಅವರು ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡುವರು. ಶಿಕ್ಷಣ ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಎಸ್.ಬಿ. ಕೊಡ್ಲಿ ಅವರಿಗೆ ಸನ್ಮಾನಿಸಲಾಗುವುದು. ವಿಶ್ರಾಂತ ನ್ಯಾಯಮೂರ್ತಿ ಎ.ಎಸ್. ಪಾಚ್ಛಾಪುರೆ ಅಧ್ಯಕ್ಷತೆ ವಹಿಸುವರು ಎಂದರು.
ದೇಸಾಯಿಗೌಡ ಪಾಟೀಲ ಮಾತನಾಡಿ, ಕೋಡಿಮಠ ಅತ್ಯಂತ ಪ್ರಸಿದ್ಧ ಕ್ಷೇತ್ರವಾಗಿದೆ. ಹಲವು ವರ್ಷಗಳಿಂದ ಕೋಡಿಮಠಕ್ಕೆ ನಡೆದುಕೊಳ್ಳುತ್ತಿದ್ದೇನೆ. ನನ್ನ ಅನುಭವಕ್ಕೆ ಬಂದ ಅನೇಕ ಘಟನಾವಳಿಗಳನ್ನು ಪುಸ್ತಕದ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಿದ್ದೇನೆ ಎಂದರು.
ನಾಗಣ್ಣ ಮಸಗಿ, ಮಂಜುನಾಥ ಮೊಹರೆ, ಇತರರು ಇದ್ದರು.