ಮಂಡ್ಯ: ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಡಾ.ಪಿ.ಬೋರೇಗೌಡ ಅವರು ತಮ್ಮ ಜೀವನಯಾನ, ಆಡಳಿತ ಅನುಭವ ಮತ್ತು ಕೃಷಿ-ಆರೋಗ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಕೃತಿಗಳ ಬಿಡುಗಡೆ ಸಮಾರಂಭವನ್ನು ಸೆ.13ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ತಿಳಿಸಿದರು.
ಡಾ.ಪಿ.ಬೋರೇಗೌಡ ಅವರು ತಮ್ಮ ಆಡಳಿತ ಸೇವಾ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಸುಧಾರಣಾ ಕ್ರಮ, ಆರೋಗ್ಯ ಕ್ಷೇತ್ರದಲ್ಲಿನ ನವೀನ ಪ್ರಯೋಗ, ನಿವೃತ್ತಿ ನಂತರ ಕೃಷಿಯಲ್ಲಿನ ಪ್ರಯೋಗ, ವ್ಯಕ್ತಿಗತ ಜೀವನದಲ್ಲಿ ಹೋರಾಟದ ಕಥನಗಳನ್ನು ಒಳಗೊಂಡ ಕೃತಿಗಳ ಬಿಡುಗಡೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಕ್ತ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಡಾ.ಎನ್.ಎಸ್.ರಾಮೇಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಯು.ಟಿ.ಖಾದರ್ ಭಾಗವಹಿಸಲಿದ್ದು, ಮಾಜಿ ಮಹಾಪೌರ ಆರೀಫ್ ಹುಸೇನ್, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಗುರುಬಸವಯ್ಯ, ಪ್ರಥಮ ಮಹಾಪೌರ ಪಿ.ವಿಶ್ವನಾಥ್, ಎಕ್ಸೆಲ್ ಸಾಪ್ಟ್‌ನ ಸ್ಥಾಪಕ ಸುಧನ್ವ, ಕಾವೇರಿ ಆಸ್ಪತ್ರೆಯ ಸ್ಥಾಪಕ ಡಾ.ಚಂದ್ರಶೇಖರ್ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.
ರೈತ ಮುಖಂಡ ಕೆ.ಬೋರಯ್ಯ, ವಕೀಲ ಧನುಕುಮಾರ್, ಗೋವಿಂದರಾಜು, ಕೆ.ಎಂ.ಕೃಷ್ಣೇಗೌಡ ಇದ್ದರು.