ಕಲಬುರಗಿ: ಸಮನ್ವಯ ಪ್ರಕಾಶನ ಸಂಸ್ಥೆಯಿAದ ೨೦೨೩ನೇ ಸಾಲಿನ ಪುಸ್ತಕ ಪ್ರಕಟಣೆಗಾಗಿ ಕಲ್ಯಾಣ ಕರ್ನಾಟಕ ಭಾಗದ ಲೇಖಕ ಹಾಗೂ ಲೇಖಕಿಯರಿಂದ ಕಥೆ, ಕವನ, ಕಾದಂಬರಿ, ವಿಮರ್ಶೆ, ಲಲಿತ ಪ್ರಬಂಧ, ಪ್ರವಾಸ ಕಥನ, , ಜೀವನ ಕಥನ, ಗಜಲï,ಇತರೇ ಸೃಜನಶೀಲ ಕೃತಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಸ್ಥೆ ಸಂಚಾಲಕ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ. ಪಿಎಚ್.ಡಿ., ಅಭಿನಂದನಾ ಗ್ರಂಥ ಪರಿಗಣಿಸಲ್ಲ. ಬರಹದ, ಡಿಟಿಪಿ ಮಾಡಿದ ಅಪ್ರಕಟಿತ ಕೃತಿಗಳನ್ನು ಸೆ.೧೦ರ ಒಳಗೆ (ಕೆ.ಎಸ್.ಕೋಬಾಳ, ಅಧ್ಯಕ್ಷರು, ಸಮನ್ವಯ ಪ್ರಕಾಶನ ಸಂಸ್ಥೆ , ಸಮನ್ವಯ ವಿವಿಧೋದ್ದೇಶ ಸಹಕಾರಿ ಸಂಘದ ಕಚೇರಿ, ಮಿನಿ ವಿಧಾನ ಸೌಧ ಸೌಧ ಹಿಂಭಾಗ, ಮೆಹತಾ ಶಾಲೆ ಹತ್ತಿರ ಕಲಬುರಗಿ) ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ 9448576492 ಸಂಖ್ಯೆಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.