ಬೆಂಗಳೂರು : ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸುವ ಸಲುವಾಗಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ಆ.23ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಆಯ್ದ ನೂರು ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಉಪಯುಕ್ತವಾದ ಪ್ರತಿ ಶಾಲೆಗೆ ನೂರು ಪುಸ್ತಕ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
10 ಸಾವಿರ ಮಕ್ಕಳ ಪುಸ್ತಕಗಳನ್ನು ಪುಸ್ತಕ ದಾನಿಗಳಿಂದ ಸಂಗ್ರಹಿಸಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1 ಲಕ್ಷ ಉಚಿತ ಪುಸ್ತಕ ವಿತರಿಸಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದ್ದರಿಂದ ಪ್ರಾಥಮಿಕ ಶಾಲಾ ಮಕ್ಕಳ ಜ್ಞಾನವಿಕಸನಕ್ಕೆ ಪೂರಕವಾದ ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಕ್ಕಳ ಪುಸ್ತಕಗಳನ್ನು ಬರಹಗಾರರು. ಪ್ರಕಾಶಕರು, ಸಂಘ-ಸಂಸ್ಥೆಗಳು, ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ವಿಶ್ವವಿದ್ಯಾಲಯದ ಪ್ರಸಾರಾಂಗ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಸಕ್ತ ಪುಸ್ತಕ ದಾನಿಗಳು 1 ಶೀರ್ಷಿಕೆಯ ಕನಿಷ್ಟ 100 ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಈ ಯೋಜನೆ ಯಶಸ್ವಿಗೊಳಿಸಲು ಸಂಘವು ಕೋರಿದೆ.
ಇಲ್ಲಿಯವರೆಗೆ ವಿವಿಧ ಜಿಲ್ಲೆಗಳ 900 ಸರ್ಕಾರಿ ಶಾಲೆಗಳಲ್ಲಿ 90 ಸಾವಿರ ಪುಸ್ತಕಗಳನ್ನು ವಿತರಿಸಲಾಗಿದೆ. ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ : ಆರ್. ದೊಡ್ಡೆಗೌಡ, ಕಾರ್ಯದರ್ಶಿ, ಸಾಹಿತ್ಯ ಸುಗ್ಗಿ, ನಂ. 40. 3ನೇ ಬ್ಲಾಕ್, 2ನೇ ಸ್ಟೇಜ್, ನಾಗರಭಾವಿ,ಬೆಂಗಳೂರು -560072