ಜಿಲ್ಲೆ

ನಾಳೆ "ಹೂ ಮಾಲೆ' ಪುಸ್ತಕ ಬಿಡುಗಡೆ

ಗಿರೀಶ ಸಗರ

ವಿಜಯಪುರ : ನಗರದ ಜಿ.ಪಂ. ರಸ್ತೆಯ ಗಾಂಧಿ ಭವನದಲ್ಲಿ ಆ. 26 ರಂದು ಸಂಜೆ 4 ಗಂಟೆಗೆ ಲೇಖಕಿ ಪ್ರೇಮಾ ಕುಲಕರ್ಣಿ ರಚಿಸಿರುವ "ಹೂ ಮಾಲೆ' ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಹಲಗಣೇಶ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್​ನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿವೈಎಸ್​ಪಿ ಬಸವರಾಜ ಯಲಗಾರ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ಹಾಗೂ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಕೂಡಗಿ ಎನ್​ಟಿಪಿಸಿ ಟಕದ ಸಾರ್ವಜನಿಕ ಸಂಪರ್ಕಾಧಿಖಾರಿ ಪೂಜಾ ಪಾಂಡೆ ಪುಸ್ತಕ ಬಿಡುಗಡೆ, ಹಿರಿಯ ಸಾಹಿತಿ ಶ್ರೀನಿವಾಸ ಪೂಜಾರಿ ಪುಸ್ತಕ ಪರಿಚಯ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ಅಧ್ಯಕ್ಷೆ ಭಾರತಿ ಪಾಟೀಲ, ಡಾ. ಸೋಮಶೇಖರ ಹುದ್ದಾರ ಹಾಗೂ ಅಖಿಲಾ ಕುರಂದವಾಡ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.