ಬೆಂಗಳೂರು: ಭಾರತೀಯ ವಿದ್ಯಾಭವನವು ಬೆಂಗಳೂರು ವಕೀಲರ ಸಂಘದ ಸಹಯೋಗದಲ್ಲಿ 21ರಿಂದ 23ರವರೆಗೆ ಹೈಕೋರ್ಟ್ ಆವರಣದಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ.
ಮೇಳದಲ್ಲಿ ಭಾರತೀಯ ವಿದ್ಯಾಭವನವು ಪ್ರಕಟಿಸಿರುವ ಭಾರತೀಯ ಸಂಸ್ಕೃತಿ, ಇತಿಹಾಸ, ಧರ್ಮ, ವೇದಾಂತ ಕುರಿತಾದ 500ಕ್ಕೂ ಅಧಿಕ ಪುಸ್ತಕಗಳು ಪ್ರದರ್ಶನಗೊಳ್ಳಲಿವೆ. ನಿತ್ಯ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇರಲಿದೆ. ಮೂರು ದಿನಗಳ ಈ ಮೇಳಕ್ಕೆ ಹೈಕೋರ್ಟ್ ಸಭಾಂಗಣ- 2ರಲ್ಲಿ 21ರ ಬೆಳಗ್ಗೆ 10 ಗಂಟೆಗೆ ಸಿಜೆ ಎನ್.ವಿ. ಅಂಜಾರಿಯಾ ಚಾಲನೆ ನೀಡಲಿದ್ದಾರೆ.
ಭಾರತೀಯ ವಿದ್ಯಾಭವನದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ಜಿ. ರಾಘವನ್ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ, ಖಜಾಂಚಿ ಎಂ.ಟಿ. ಹರೀಶ್, ಹೈಕೋರ್ಟ್ ವಿಭಾಗದ ಉಪಾಧ್ಯಕ್ಷ ಎಂ. ಚಾಮರಾಜ್, ಜಂಟಿ ಕಾರ್ಯದರ್ಶಿ ಕೆ. ಚಂದ್ರಕಾಂತ ಪಾಟೀಲ ಭಾಗವಹಿಸಲಿದ್ದಾರೆ ಎಂದು ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ತಿಳಿಸಿದ್ದಾರೆ.