ಬೆಳ್ತಂಗಡಿ: ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಪ್ರೌಢಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿ ವರೆಗಿನ 670 ವಿದ್ಯಾರ್ಥಿಗಳಿಗೆ 3.5 ಲಕ್ಷ ರೂ.ವೆಚ್ಚದ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು.
ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ ಉರುವಾಲು ಮತ್ತು ಪತ್ರಕರ್ತ ಆರ್.ದೇವರಾಯ ಪ್ರಭು ಪುಸ್ತಕ ವಿತರಿಸಿದರು. ಆಡಳಿತ ಮಂಡಳಿ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ಪತ್ರಕರ್ತ ಪ್ರಶಾಂತ್ ಆಚಾರ್ಯ, ಕಣಿಯೂರು ಗ್ರಾಪಂ ಸದಸ್ಯ ಪ್ರವೀಣ್ ಗೌಡ, ಪ್ರಗತಿಪರ ಕೃಷಿಕ ಜಗದೀಶ್ ಗೌಡ ದಿಡುಪೆ, ಭರತ್ ಗೌಡ ಕಣಿಯೂರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಕುಮಾರ್ ಎನ್. ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಮೋದ್ ಕುಮಾರ್ ವಂದಿಸಿದರು.