ಜಿಲ್ಲೆ

ಪುಸ್ತಕ ಓದಿನಿಂದ ದುರ್ಗಣ ದೂರ

ವಿನಯ ಹೆಗಡೆ

ಕುಮಟಾ: ಪುಸ್ತಕಗಳಿಗಿಂತ ಶ್ರೇಷ್ಠ ಸ್ನೇಹಿತರಿಲ್ಲ, ಪುಸ್ತಕಗಳು ಜ್ಞಾನ ವೃದ್ಧಿ, ಕೌಶಲ್ಯ ವೃದ್ಧಿ ಜತೆಗೆ ಋಣಾತ್ಮಕ-ದುರ್ಗಣಗಳ ನಿವಾರಿಸಿಕೊಂಡು ಉತ್ತಮ ನಾಗರಿಕನಾಗಲು ಹೆಚ್ಚು ಸಹಕಾರಿಯಾಗಿದೆ ಎಂದು ಡಾ. ಬಾಳಿಗಾ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ನಾಯಕ ಹೇಳಿದರು.

ತಾಲೂಕಿನ ಬಾಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀ ಸಂಸ್ಥೆಯಿಂದ ಕಲೆ, ವಾಣಿಜ್ಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖಕರ ಪುಸ್ತಕವನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ಮೊಬೈಲ್, ಟಿವಿ, ಅಂತರ್ಜಾಲದ ಬಳಕೆಯಿಂದ ಪುಸ್ತಕಗಳಿಂದ ವಿಮುಖರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಪುಸ್ತಕಗಳ ಬಳಕೆ ಕಡಿಮೆಯಾಗಿದ್ದು ಅಂತರ್ಜಾಲದಲ್ಲಿ ಬರುವ ಮಾಹಿತಿಗಳಿಂದ ವಿದ್ಯಾರ್ಜನೆ ನಡೆಯುತ್ತಿದೆ.

ಇದರಿಂದ ಉತ್ತಮ ಪುಸ್ತಕಗಳ ಮೌಲ್ಯ ವಿದ್ಯಾರ್ಥಿಗಳಿಗೆ ತಿಳಿಯದೆ ಪುಸ್ತಕಗಳು ಕೇವಲ ಪ್ರದರ್ಶಕ ವಸ್ತುಗಳಾಗಿ ವ್ಯರ್ಥವಾಗುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ. ಸತೀಶ ಮಹಾಲೆ, ಸರ್ಕಾರಿ ಕಾಲೇಜುಗಳಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಭಾರತಿ ಸಂಸ್ಥೆಯ ಈ ಸೇವಾ ಕಾರ್ಯ ತುಂಬಾ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಪ್ರೊ. ಗೌರೀಶ ಕೆ.ಪಿ., ಪ್ರೊ. ನಿರ್ಮಲಾ ನಾಯಕ, ಪ್ರೊ. ಗಾಯತ್ರಿ ಹಳದಿಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರ್ಪಿತ ಹಾಗೂ ಕಾಂಚನ ಪ್ರರ್ಥಿಸಿದರು. ಶೋಭಾ ಗೌಡ ಸ್ವಾಗತಿಸಿ ಪರಿಚಯಿಸಿದರು.

ಮಧುರಾ ನಾಯಕ ನಿರೂಪಿಸಿದರು. ಭಾಗ್ಯ ನಾಯಕ ವಂದಿಸಿದರು.