ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆಯ ಕೀಲು, ಮೂಳೆ ಚಿಕಿತ್ಸೆ ವಿಭಾಗದಲ್ಲಿ ಎಂಟತ್ತು ದಿವಸಗಳಿಂದ ಸಿಆರ್‌ಎಂ ಯಂತ್ರ(ಎಕ್ಸರೇ)ಕೆಟ್ಟಿದ್ದು, ರೋಗಿಗಳು ಪರದಾಡುವಂತಾಗಿದೆ.
ಯಂತ್ರ ಕೈಕೊಟ್ಟಿರುವುದರಿಂದ ಮೂಳೆ ಮುರಿತ ಇತ್ಯಾದಿಗಳಿಂದ ನರಳುತ್ತಿರುವ ರೋಗಿಗಳಿಗೆ ತುರ್ತಾಗಿ ಆಪರೇಷನ್ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಬರುತ್ತಿರುವವರು, ಒಳ ರೋಗಿಗಳಾಗಿ ದಾಖಲಾಗುವವರಿಗೆ ಆಪರೇಷನ್‌ನೊಂದಿಗೆ ಚಿಕಿತ್ಸೆ ಮುಂದುವರಿಸಲು ವೈದ್ಯರು ವಿಫಲರಾಗುತ್ತಿದ್ದಾರೆ ಎಂಬ ದೂರು ಶನಿವಾರ ರೋಗಿಗಳಿಂದ ಕೇಳಿ ಬಂತು.
ನಾಲ್ಕೈದು ದಿನಗಳ ಹಿಂದೆ ವಿದ್ಯುತ್ ಅಡಚಣೆಯಿಂದಾಗಿ ಎಕ್ಸರೇ ಯಂತ್ರ ದುರಸ್ತಿಗೆ ಬಂದಿದೆ. ತಜ್ಞರು ಬಂದು ಪರಿಶೀಲಿಸಿದ್ದು, ಅದರ ಟ್ಯೂಬ್‌ವೊಂದನ್ನು ಬೇರೆಡೆಯಿಂದ ತರಿಸಬೇಕಿದೆ. ಇದಕ್ಕಾಗಿ ಇನ್ನು ಕೆಲ ದಿನಗಳ ಸಮಯ ಬೇಕಾಗಲಿದೆ ಎಂದು ಡಿಎಸ್ ಡಾ.ಎಸ್.ಪಿ. ರವೀಂದ್ರ ಹೇಳಿದ್ದಾರೆ.
ತುರ್ತಾಗಿ ಆಪರೇಷನ್ ಅಗತ್ಯವಿರುವಂಥವರನ್ನು ಎಬಿಎಆರ್‌ಕೆ ಕಾರ್ಡ್‌ನೊಂದಿಗೆ ನಗರದ ಬಸವೇಶ್ವರ ಆಸ್ಪತ್ರೆಗೆ ರೆಫರ್ ಮಾಡ ಲಾಗುವುದು. ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಇಚ್ಟಞ ಯಂತ್ರವನ್ನು ತಾತ್ಕಾಲಿಕವಾಗಿ ತರಿಸಿಕೊಂಡು ಬಳಸಬೇಕಿದೆ. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿ ಅನುಮತಿ ಕೇಳಿದ್ದೇವೆ. ನಮ್ಮಲ್ಲಿ ದುರಸ್ತಿಯಲ್ಲಿರುವ ಯಂತ್ರ ಸರಿಯಾಗಲು ಇನ್ನೂ ಐದಾರು ದಿನಗಳು ಬೇಕಾಗಬಹುದೆಂದು ರವೀಂದ್ರ ತಿಳಿಸಿದ್ದಾರೆ.