ಜಿಲ್ಲೆ

ನ.24ರಂದು ಸೇವಾಭಾರತಿ ಸಂಸ್ಥೆಯಿಂದ ಮೂಳೆ ತಪಾಸಣಾ ಶಿಬಿರ

Mangaluru - Shravan Kumar Nala

ಮಂಗಳೂರು: ಸೇವಾಭಾರತಿ ಮಂಗಳೂರು ಇದರ ಸೇವಾ ಪ್ರಕಲ್ಪವಾದ ಅನಂತಸೌಖ್ಯ ಹಾಗೂ ಕೆನರಾ ಆರ್ಥೋಪೆಡಿಕ್ ಸೊಸೈಟಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಎಲ್ಲಾ ವಯೋಮಾನದವರಿಗಾಗಿ ನ.24ರ ಭಾನುವಾರ ಎಲುಬು, ಮೂಳೆ ತಪಾಸಣಾ ಶಿಬಿರವು ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಠಾರದಲ್ಲಿ ನಡೆಯಲಿದೆ. ಮೂಳೆ ಶಸ್ತ್ರ ಚಿಕಿತ್ಸಕರಾದ ಡಾ.ಕೆ.ಆರ್.ಕಾಮತ್ ಮುಂದಾಲತ್ವದ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ತಂಡದಿಂದ ತಪಾಸಣಾ ಕಾರ್ಯ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರ ತನಕ ಈ ಉಚಿತ ಶಿಬಿರ ಜರಗಲಿದ್ದು, ಆಸಕ್ತ ನಾಗರಿಕರು ಚೇತನಾ ಬಾಲ ವಿಕಾಸ ಕೇಂದ್ರದ ಕಚೇರಿಯಲ್ಲಿ ಅಥವಾ 9036493397ಗೆ ಎಸ್.ಎಂ.ಎಸ್, ವಾಟ್ಸಾಪ್ ಮೂಲಕ ನೋಂದಣಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.