ಜಿಲ್ಲೆ

ನೋವಿನಲ್ಲೂ ಪರೋಪಕಾರಿ ಚಿಂತನೆ ಮಾಡಿದ ಕುಟುಂಬ

ಸುನಿಲ್ ಪೊನ್ನೇಟಿ

ಮಡಿಕೇರಿ:

ಅಪಘಾತವೊಂದರಲ್ಲಿ ಮೃತರಾದ ಸೋಮವಾರಪೇಟೆಯ ಜಂಬೂರು ಗ್ರಾಮದ ನಿವಾಸಿ ಎನ್. ಈಶ್ವರ (32) ಎಂಬವರ ಮೂಳೆಗಳನ್ನು ದಾನ ಮಾಡಲಾಗಿದೆ. ಮೃತದೇಹದಿಂದ ಮೂಳೆ ದಾನ ಮಾಡಿದ ಪ್ರಕರಣ ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಇದೇ ಮೊದಲು ಎನ್ನಲಾಗಿದ್ದು, ನೋವಿನಲ್ಲೂ ಪರಹಿತ ಚಿಂತಿಸಿದ ಕುಟುಂಬದ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಎನ್. ಈಶ್ವರ ಡಿ.21ರಂದು ರಾತ್ರಿ ತಾವು ಚಲಾಯಿಸುತ್ತಿದ್ದ ಪಿಕ್‌ಅಪ್ ವಾಹನ ಗರಗಂದೂರು ಬಳಿ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಇವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಈಶ್ವರ ಅವರನ್ನು ಮಂಗಳೂರಿನ ನಿಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಈಶ್ವರ ಗಂಭೀರ ಸ್ಥಿತಿಯಲ್ಲಿದ್ದ ವಿಚಾರವನ್ನು ವೈದ್ಯರು ಅವರ ಸಹೋದರಿ ಸೌಮ್ಯ ಬಳಿ ತಿಳಿಸಿದಾಗ ಸ್ವಯಂಪ್ರೇರಿತರಾಗಿ ಅಂಗಾAಗ ದಾನದ ಕುರಿತು ಆಸಕ್ತಿ ತೋರಿಸಿದರು. ಕಸಿ ಸಂಯೋಜಕರಾದ ಡಾ. ಅಕ್ಷತಾ ಶೆಟ್ಟಿ ಮತ್ತು ನರಶಸ್ತç ಚಿಕಿತ್ಸಕರು ಸೇರಿದಂತೆ ವೈದ್ಯಕೀಯ ತಂಡ ಸಮಾಲೋಚನೆ ನಡೆಸಿತು. ನಂತರ ಸಹೋದರಿ ಸೌಮ್ಯ ಹಾಗೂ ಕುಟುಂಬ ವರ್ಗ ಈಶ್ವರ ಅವರ ಮೂಳೆಗಳನ್ನು ಕಸಿ ಮಾಡಲು ದಾನ ನೀಡುವುದಾಗಿ ಒಪ್ಪಿಕೊಂಡರು.

ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ದಾನದ ಪ್ರಯೋಜನಗಳು ಮತ್ತು ಸ್ವೀಕರಿಸುವವರ ಮೇಲೆ ಅದು ಬೀರಬಹುದಾದ ಪ್ರಭಾವವನ್ನು ಮೃತರ ಕುಟುಂಬ ಅರ್ಥಮಾಡಿಕೊಂಡಿದೆ ಎಂದು ವೈದ್ಯರ ತಂಡ ಖಚಿತ ಪಡಿಸಿಕೊಂಡಿತು. ಇದು ಮೆಡಿಕೋ-ಲೀಗಲ್ ಪ್ರಕರಣವಾಗಿರುವುದರಿಂದ, ದಾನ ನೀಡುವ ಮೊದಲು ಪೊಲೀಸರು ಮತ್ತು ಈಶ್ವರ ಅವರ ಹತ್ತಿರದ ಸಂಬAಧಿಕರಿAದ ಅಗತ್ಯ ಅನುಮತಿಯನ್ನು ಪಡೆಯಲಾಯಿತು.

ಆರ್ಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಿಕ್ರಂ ಶೆಟ್ಟಿ ನೇತೃತ್ವದಲ್ಲಿ ಪ್ರೊ. ಎಂ.ಶಾAತರಾಮ ಶೆಟ್ಟಿ ಹಾಗೂ ಶಸ್ತçಚಿಕಿತ್ಸಾ ತಂಡ ಮೂಳೆಯನ್ನು ಬೇರ್ಪಡಿಸಿತು. ಮೃತದೇಹದ ಮೂಳೆಗಳ ಸ್ಥಳದಲ್ಲಿ ಪ್ಲಾಸ್ಟಿಕ್ ಮೂಳೆಗಳನ್ನು ಸೇರಿಸಲಾಯಿತು.

ಈ ಮೂಳೆ ದಾನದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತ ಆರು ಮಕ್ಕಳ ಕೈಕಾಲುಗಳನ್ನು ಸಮರ್ಥವಾಗಿ ಉಳಿಸಬಹುದು. ಮೂಳೆಗಳನ್ನು ಅಂಗ ಉಳಿಸುವ ಶಸ್ತçಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಯುವ ಕ್ಯಾನ್ಸರ್ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮನೆ ಮಗನ ಸಾವಿನ ನೋವಿನಲ್ಲೂ ಪರಹಿತ ಚಿಂತನೆ ನಡೆಸಿದ ಈಶ್ವರ ಕುಟುಂಬದ ಬೆಂಬಲ, ಸಹಕಾರ ವೈದ್ಯಕೀಯ ವಲಯದಲ್ಲಿ ಶ್ಲಾಘನೆಗೆ ಒಳಗಾಗಿದೆ.