ಹುಬ್ಬಳ್ಳಿ: ಇಲ್ಲಿಯ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ ವತಿಯಿಂದ ಪ್ರಶಸ್ತಿಗೆ ಕನ್ನಡದ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.
ಬೊಮ್ಮಾಯಿ ಪ್ರತಿಷ್ಠಾನವು ಕಳೆದ ಕೆಲ ವರ್ಷಗಳಿಂದ ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಬಹುಮಾನ ನೀಡುತ್ತ ಬಂದಿದ್ದು, ಜಾನಪದಕ್ಕೆ ಸಂಬಂಧಿಸಿದ ಕೃತಿಗೆ ಜಾನಪದ ಸಿರಿ, ಮಹಿಳೆಯರು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಅಕ್ಕ ಪ್ರಶಸ್ತಿ, 18 ವರ್ಷದೊಳಗಿನ ಮಕ್ಕಳು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಅರಳುಮೊಗ್ಗು ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ.
ಪ್ರತಿಯೊಂದು ಪ್ರಶಸ್ತಿ 25 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಜನವರಿ 2023ರಿಂದ ಡಿಸೆಂಬರ್ 2024ರ ವರೆಗೆ ಪ್ರಥಮ ಬಾರಿಗೆ ಮುದ್ರಣವಾದ ಕೃತಿಗಳನ್ನು ರಚಿಸಿದ ಲೇಖಕರು ಎರಡು ಪ್ರತಿಗಳನ್ನು 2024ರ ಡಿಸೆಂಬರ್ 25ರ ಒಳಗೆ ಕಳಿಸಬೇಕು.
ಪ್ರತಿಷ್ಠಾನದ ಸಂಚಾಲಕ ಚಂದ್ರಶೇಖರ ವಸ್ತ್ರದ, ಬೆಳಗು, ಆನಂದಾಶ್ರಮ ರಸ್ತೆ, ಪಂಚಾಕ್ಷರಿ ನಗರ 5ನೇ ಎ ಕ್ರಾಸ್, ಗದಗ 582101 ಈ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.