ಭಟ್ಕಳ : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ್ದು, ತಾಲೂಕಿನ ವಿವಿಧ ಜನನಿಬಿಡ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿತು.
ತಾಲೂಕು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕಾರವಾರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ತಂಡ ಭಟ್ಕಳ ರೈಲು ನಿಲ್ದಾಣ ಹಾಗೂ ನ್ಯಾಯಾಲಯದ ಒಳ ಭಾಗ ಮತ್ತು ಹೊರ ಭಾಗದಲ್ಲಿ ತಪಾಸಣೆ ನಡೆಸಿತು.
ಮೇಲ್ವಿಚಾರಕ ಅನಿಲ ನಾಯ್ಕ, ಸಂಜಯ ಭುವಿ , ಶ್ವಾನ ನಿರ್ವಾಹಕ ಸಂತೋಷ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.