ಜಿಲ್ಲೆ

ಪತ್ರಕರ್ತರ ಕಾರಿನಡಿ ನಾಡ ಬಾಂಬ್ ಸ್ಫೋಟ

Uttara Kannada - Subash Hegde

ಜೊಯಿಡಾ: ಜನ ಸಂಪರ್ಕ ಸಭೆಗೆ ಆಗಮಿಸುತ್ತಿದ್ದ ಪತ್ರಕರ್ತರ ಕಾರಿನಡಿ ನಾಡ ಬಾಂಬ್ ಸ್ಫೋಟವಾದ ಘಟನೆ ಜೊಯಿಡಾದಲ್ಲಿ ಮಂಗಳವಾರ ನಡೆದಿದೆ.
ಗುಂದದಿಂದ ಜೊಯಿಡಾಕ್ಕೆ ಆಗಮಿಸುತ್ತಿದ್ದ ಕಾರಿನಡಿ ಬ್ಲಾಸ್ಟ್ ಆಗಿದೆ. ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಹಂದಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು,ಅದರ ಮೇಲೆ ಕಾರಿನ ಟಯರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.