ಮಂಗಳೂರು: ಪದವಿನಂಗಡಿ ಬೊಲ್ಪುಗುಡ್ಡೆ ನವಚೇತನ ಫ್ರೆಂಡ್ಸ್ ಕ್ಲಬ್‌ನ 32ನೇ ವಾರ್ಷಿಕೋತ್ಸವ ಸೋಮವಾರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬೆಳಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ರತ್ನಾಕರ ಕಾಮತ್, ಇಂಡಿಯನ್ ಸೈಕೇಟ್ರಿ ಸೊಸೈಟಿಯ ಅಧ್ಯಕ್ಷ ಡಾ.ಪಿ.ಕೆ.ಕಿರಣ್ ಕುಮಾರ್, ಪಿಎಸ್‌ಐ ಹರೀಶ್ ಪದವಿನಂಗಡಿ, ಉದ್ಯಮಿ ಅನಿಲ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು.
ನವಚೇತನ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಿತಿನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೀವನ್ ಪ್ರಸಾದ್, ಕಾರ್ಯದರ್ಶಿ ಸದೀಪ್ ಕುಲಾಲ್, ಜೊತೆ ಕಾರ್ಯದರ್ಶಿ ಸತೀಶ್ ಪಚ್ಚನಾಡಿ, ಖಜಾಂಚಿ ವಿವೇಕ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಬಾಲಕೃಷ್ಣ ಯೆಯ್ಯಡಿ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ ಕಥೆ ಎಡ್ಡೆಂಡು ನಾಟಕ ಪ್ರದರ್ಶನಗೊಂಡಿತು.