ಜಿಲ್ಲೆ

ಸಾವಿನಲ್ಲೂ ಸಾರ್ಥಕ್ಯ ಮೆರೆದ ದತ್ತಾತ್ರೇಯ

ಬೆಳಗಾವಿ: ಇಲ್ಲಿನ ಕ್ಯಾಂಪ್ ಪ್ರದೇಶದ ನಿವಾಸಿ ದತ್ತಾತ್ರೇಯ ಬಾಲಚಂದ್ರ ದೇಶಪಾಂಡೆ (84) ಈಚೆಗೆ ನಿಧನರಾದರು. ಮೃತರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್‌ಗೆ ದೇಹದಾನ ಮಾಡಿದ್ದಾರೆ. ಮೃತರಿಗೆ ಪತ್ನಿ,ಇಬ್ಬರು ಪುತ್ರರು ಇದ್ದಾರೆ.

ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ಬಂಡಾರಕ್ಕೆ ಚರ್ಮ ದಾನವಾಗಿ ನೀಡಿ ಸುಟ್ಟ ಗಾಯದಿಂದ ಬಳಲುತ್ತಿದ್ದ ರೋಗಿಗಳ ಬದುಕುಳಿಸಲು ಅನುಕೂಲವಾಗುವುದು ಹಾಗೂ ದೇಹವನ್ನು ಹುಬ್ಬಳ್ಳಿಯ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೀಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ. ಪ್ರಾಚಾರ್ಯ ಡಾ.ಎಂ.ಜಿ.ಹಿರೇಮಠ ಹಾಗೂ ಡಾ.ರಾಮಣ್ಣವರ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ದೇಶಪಾಂಡೆ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.