ಮೃತ ಯುವಕ ಇಂದಾವರ ಗ್ರಾಮದ ಜಯದೀಪ್ 
ಜಿಲ್ಲೆ

ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ನವೀನ ಬಿ.ಎಂ

ಶಿವಮೊಗ್ಗ: ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಅಪ್‌ಲೋಡ್ ಮಾಡಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮವಾರ ತೀರ್ಥಹಳ್ಳಿ ತುಂಗಾ ನದಿಯ ಸ್ಮಶಾನಕಟ್ಟೆ ಬಳಿ ಪತ್ತೆಯಾಗಿದೆ.

ಇಂದಾವರ ಗ್ರಾಮದ ಜಯದೀಪ್ (24) ಮೃತ ಯುವಕ. ಈತ ಕಳೆದ ಶನಿವಾರ ನಾಪತ್ತೆಯಾಗಿದ್ದ. ಅದಕ್ಕೂ ಮೊದಲು ಮೂರು ಪುಟದ ಪತ್ರವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದ.
ಆತನ ಬೈಕ್ ತುಂಗಾ ನದಿ ದಂಡೆ ಮೇಲೆ ಪತ್ತೆಯಾಗಿತ್ತು. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಆದರೆ ಜಯದೀಪ್ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಸೋಮವಾರ ಬೆಳಗ್ಗೆ ಜಯದೀಪ್ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.