ಜಿಲ್ಲೆ

ತುಂಡಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಹುಬ್ಬಳ್ಳಿ: ನಗರದ ಅಮರಗೋಳ ರೈಲ್ವೆ ನಿಲ್ದಾಣ ಬಳಿಯ ಹಳಿ ಮೇಲೆ ಯುವಕನೊಬ್ಬನ ತುಂಡಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕುಸುಗಲ್ ಗ್ರಾಮದ ಸಿದ್ದಪ್ಪ ಬಿ. (22) ಮೃತ ಯುವಕ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ? ಎಂಬುದರ ತನಿಖೆಕೈಗೊಂಡಿದ್ದಾರೆ.